newsics.com
ಬೆಂಗಳೂರು : ಅನ್ಬಾಕ್ಸಿಂಗ್ ಬೆಂಗಳೂರು ಹಾಗೂ ನಿಖಿಲ್ ಕಾಮತ್ ಅವರ ಡಬ್ಲ್ಯೂಟಿ ಫಂಡ್ ಸಹಯೋಗದೊಂದಿಗೆ ನಡೆದ “ನಮ್ಮ ಬೆಂಗಳೂರು ಚಾಲೆಂಜ್” ಅನ್ನು 5 ಜನ ಗೆದ್ದಿದ್ದಾರೆ.
ಬೆಂಗಳೂರು ಸಮಸ್ಯೆಗೆ ಪರಿಹಾರ ನೀಡಿ ಎಂದು “ನಮ್ಮ ಬೆಂಗಳೂರು ಚಾಲೆಂಜ್”ಅನ್ನು ಆಯೋಜನೆ ಮಾಡಲಾಗಿತ್ತು. ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ. ಅನುದಾನ ನೀಡುವಂತೆ ಘೋಷಣೆ ಮಾಡಲಾಗಿತ್ತು.
ಬಿಎಲ್ಆರ್ ಹಬ್ಬದಲ್ಲಿ ನಡೆದ ಬೆಂಗಳೂರು ಇಂಟರ್ನ್ಯಾಶನಲ್ ಸೆಂಟರ್ನಲ್ಲಿ ಫ್ಯೂಚರ್ಸ್ ಕಾನ್ಫರೆನ್ಸ್ನಲ್ಲಿ ವಿಜೇತರನ್ನು ಘೋಷಣೆ ಮಾಡಲಾಗಿದ್ದು, ಉತ್ತಮ ಐಡಿಯಾ ಮತ್ತು ದೂರದೃಷ್ಟಿಯ ಆಲೋಚನೆಯಗಳೊಂದಿಗೆ ಬಂದ 5 ತಂಡಗಳಿಗೆ ತಲ 10 ಲಕ್ಷ ರೂ. ಅನುದಾನ ನೀಡಲಾಗಿದೆ.
Unboxing BLR ಫೌಂಡೇಶನ್ ಮತ್ತು WTFund ಕೊನೆಯದಾಗಿ 16 ಬೆಸ್ಟ್ ಐಡಿಯಾಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಬಳಿಕ 8 ತಂಡವನ್ನು ಆಯ್ಕೆ ಮಾಡಿ ಕೊನೆಯದಾಗಿ 5 ತಂಡಗಳಿಗೆ ಅವಾರ್ಡ್ ನೀಡಲಾಗಿದೆ.