newsics.com
ಹಸುವಿನ ಹಾಲು, ಗೋಮೂತ್ರ, ಗೋಮಯ ಎಲ್ಲವೂ ಪ್ರಯೋಜನಕಾರಿಯೇ. ಸೆಗಣಿಯಿಂದಲೂ ಹಲವು ಪ್ರಯೋಜನಗಳಿವೆ.
ಸೆಗಣಿಯಿಂದ ಅಂಗಳ ಸಾರಿಸುವುದು ಹಿಂದಿನಿಂದಲೂ ಇದೆ. ಕಾಂಕ್ರೀಟ್, ಇಂಟರ್‌ಲಾಕ್ ಬಂದಮೇಲೆ ಇದರ ಬೇಡಿಕೆ ಕಡಿಮೆಯಾಗಿದೆ. ಆದ್ರೆ ಕೆಲವೊಂದು ಹಳ್ಳಿಗಳಲ್ಲಿ ಈಗಲೂ ಸೆಗಣಿಗೆ ಭಾರೀ ಬೇಡಿಕೆಯಿದೆ.
ಹಸುವಿನ ಸಗಣಿ ಸಾರಜನಕ, ರಂಜಕ, ಪೊಟ್ಯಾಸಿಯಮ್ ಮತ್ತು ಕಬ್ಬಿಣದ ಅಂಶಗಳನ್ನು ಒಳಗೊಂಡಿದೆ. ಹಸುವಿನ ಸೆಗಣಿಯಿಂದ ಮಾಡಿದ ಏನೇ ವಸ್ತುವಾದರೂ ಹೇರಳವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
ವೈಜ್ಞಾನಿಕ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಹಸುವಿನ ಸೆಗಣಿ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಲಕ್ಷ್ಮಿ ದೇವಿಯು ಹಸುವಿನ ಸಗಣಿಯಲ್ಲಿ ನೆಲೆಸಿದ್ದಾಳೆ. ಆದ್ದರಿಂದ ಇದನ್ನು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಬಳಸಲಾಗುತ್ತದೆ.
ಹಸುವಿನ ಸೆಗಣಿಯಲ್ಲಿ ಪೋಷಕಾಂಶಗಳು ಹೇರಳವಾಗಿರುವ ಕಾರಣ ಮನೆಗಳಲ್ಲಿ ಮಾತ್ರವಲ್ಲದೆ ಹೊಲಗಳಲ್ಲಿಯೂ ಬಳಸಲಾಗುತ್ತದೆ.
3% ಸಾರಜನಕ, 2% ರಂಜಕ ಮತ್ತು 1% ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಅಲ್ಲದೆ ಇದು ಜೈವಿಕವಾಗಿ ಹೊಲಗಳಲ್ಲಿ ಪೋಷಕಾಂಶಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.