ಟೀಂ ಇಂಡಿಯಾಗೆ ಆಘಾತ; ಅಭ್ಯಾಸದ ವೇಳೆ ರಾಹುಲ್ ಮೊಣಕೈಗೆ ಗಾಯ

newsics.com ನವದೆಹಲಿ : ಅಭ್ಯಾಸ ಪಂದ್ಯದ ವೇಳೆ ಕೆಎಲ್ ರಾಹುಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ರಾಹುಲ್, ಮಧ್ಯದಲ್ಲಿಯೇ ಬ್ಯಾಟಿಂಗ್ ತೊರೆದು ಡಗೌಟ್ಗೆ ತೆರಳಿದ್ದಾರೆ. ಪರ್ತ್ ಟೆಸ್ಟ್ ಆರಂಭಕ್ಕೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಬಿರುಸಿನ ಅಭ್ಯಾಸ ನಡೆಸುತ್ತಿದೆ. ನವೆಂಬರ್ 15 ಶುಕ್ರವಾರದಂದು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ತಂಡವನ್ನು ರಚಿಸಿಕೊಂಡು ತಮ್ಮ ತಮ್ಮಲ್ಲೇ ಅಭ್ಯಾಸ ನಡೆಸಿತು. ಈ ವೇಳೆ ಕೆಎಲ್ ರಾಹುಲ್ ಮೊಣಕೈಗೆ ತೀವ್ರ ಪೆಟ್ಟಾಗಿದ್ದು, ಅಭ್ಯಾಸದಿಂದ ಹೊರನಡೆದಿದ್ದಾರೆ. ಪರ್ತ್‌ನ ಡಬ್ಲ್ಯುಎಸಿಎ ಸ್ಟೇಡಿಯಂನಲ್ಲಿ ಭಾರತ ತಂಡ … Continue reading ಟೀಂ ಇಂಡಿಯಾಗೆ ಆಘಾತ; ಅಭ್ಯಾಸದ ವೇಳೆ ರಾಹುಲ್ ಮೊಣಕೈಗೆ ಗಾಯ