newsics.com
ಸಾಮಾನ್ಯವಾಗಿ ಎಲ್ಲರೂ ಕೂಡಾ ತಾವು ಅಂದವಾಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಅದರಲ್ಲೂ ಹುಡುಗಿಯರಂತೂ ತಮ್ಮ ಮುಖದ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ. ಆದರೆ ಚಳಿಗಾಲದಲ್ಲಿ ತಮ್ಮ ಅಂದವನ್ನು ಕಾಪಾಡಿಕೊಳ್ಳುವುದು ಎಲ್ಲರಿಗೂ ಒಂದು ದೊಡ್ಡ ಸವಾಲೇ ಸರಿ. ಇನ್ನು ನೈಸರ್ಗಿಕವಾಗಿ ಮುಖ ಹೊಳೆಯಬೇಕು ಆಕರ್ಷಕವಾಗಿ ಕಾಣಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದರಲ್ಲೂ ಚಳಿಗಾಲದಲ್ಲೂ ಮಿಂಚುವ ತ್ವಚೆ. ಹೌದು, ನಿಮ್ಮ ತ್ವಚೆಯ ಸೌಂದರ್ಯ ಎಲ್ಲಾ ಸಮಯಕ್ಕಿಂತ ಚಳಿಗಾಲದಲ್ಲಿ ಬಹಳ ಮುಖ್ಯವಾಗುತ್ತದೆ.
ಚಳಿಗಾಲದಲ್ಲೂ ಮಿಂಚುವ ತ್ವಚೆಗಾಗಿ ಕೊರಿಯನ್ ‘ಚೋಕ್ ಚೋಕ್’ ಸ್ಕಿನ್ ಕೇರ್ ಫಾಲೋ ಮಾಡಿ. ಇನ್ನು ಕೊರಿಯಾದ ಹುಡುಗಿಯರ ಹೊಳೆಯುವ ತ್ವಚೆಯನ್ನು ನೀವು ಖಂಡಿತವಾಗಿ ನೋಡಿರಬೇಕು. ಚಳಿಗಾಲದಲ್ಲಿ ತ್ವಚೆಗಾಗಿ ಜನರು ಹೆಚ್ಚು ಕ್ರೀಮ್ ಅನ್ನು ಮುಖಕ್ಕೆ ಹಚ್ಚುತ್ತಾರೆ, ಇದರಿಂದ ಮುಖ ಜಿಡ್ಡು ಕಾಣುತ್ತದೆ. ಆದರೆ ಚೋಕ್-ಚೋಕ್ ಲುಕ್ ಕೇರ್‌ನಿಂದ ತ್ವಚೆಗೆ ಹೊಳಪು ಬರುತ್ತದೆ.
ಕೊರಿಯನ್ ‘ಚೋಕ್ ಚೋಕ್’ ತ್ವಚೆಗಾಗಿ, ನೀವು ಹಗುರವಾದ ಮಾಯಿಶ್ಚರೈಸರ್ ಅನ್ನು ಬಳಸಬೇಕು. ಇದು ತೇವಾಂಶವನ್ನು ಉಳಿಸಿಕೊಂಡು ತ್ವಚೆಯನ್ನು ಹೈಡ್ರೆಟ್ ಮಾಡುತ್ತದೆ. ಇದರಿಂದ ರಂಧ್ರಗಳು ಮುಚ್ಚುವುದಿಲ್ಲ. K-ಸೌಂದರ್ಯ ತ್ವಚೆ ನಿಗಾ ಸಲಹೆಗಳು ಸೂಕ್ಷ್ಮ ತ್ವಚೆ ಹೊಂದಿರುವವರಿಗೂ ಪ್ರಯೋಜನಕಾರಿ.
ಉತ್ಪನ್ನವನ್ನು ತುಂಬ ತೆಳುವಾಗಿ ಮುಖಕ್ಕೆ ಹಚ್ಚುವ ಮೂಲಕ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು. ನೀವು ಕೊರಿಯನ್ ತ್ವಚೆಯ ಅಭಿಮಾನಿಯಾಗಿದ್ದರೆ, ತ್ವಚೆಯನ್ನು ತಾಜಾವಾಗಿಡಲು ಫೇಶಿಯಲ್ ಮಿಸ್ಟ್ ಬಾಟಲಿಯಿಂದ ಸ್ಪೇ ಮಾಡಿ. ಇದು ತ್ವಚೆಗೆ ಹೈಡೇಶನ್ ನೀಡುತ್ತದೆ. ಕೊರಿಯನ್ ಚೋಕ್ ಚೋಕ್ ತ್ವಚೆ ಸಲಹೆಗಳ ಪ್ರಕಾರ, ಸ್ಕಿನ್‌ಗೆ ಆಲೋಹಾಲ್ ರಹಿತ ಟೋನರ್ ಬಳಸಬೇಕು ಇದು pH ಸಮತೋಲನ ಕಾದು ತ್ವಚೆಯನ್ನು ಮೃದುವಾಗಿಸುತ್ತದೆ. ಹೈಲುರಾನಿಕ್ ಆಮ್ಲ, ಗ್ಲಿಸರಿನ್ ಬಳಸಬಹುದು.