newsics.com
ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಬಿಡುಗಡೆ ಮಾಡುವ ಫೋನ್‌ಗೆ ಮಾಡೆಲ್ ಪೈ ಎಂದು ಹೆಸರಿಡಲಾಗಿದೆ.
ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಆಗಿ ಹರಿದಾಡುತ್ತಿವೆ. ಆದರೆ ಕಂಪನಿಯಿಂದ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಇತ್ತೀಚೆಗೆ, ಯೂಟ್ಯೂಬ್, ಎಕ್ಸ್, ಇನ್ಸ್ಟಾದಲ್ಲಿ ವಿಡಿಯೋಗಳು ವೈರಲ್ ಆಗಿದ್ದು, ಇದು ಟೆಸ್ಲಾ ಬಿಡುಗಡೆ ಮಾಡಲು ಹೊರಟಿರುವ ನೂರು ಡಾಲರ್ ಫೋನ್ ಎಂದು ಹೇಳಿಕೊಳ್ಳಲಾಗುತ್ತಿದೆ.
ಈ ಫೋನ್ ತಂತ್ರಜ್ಞಾನ ಲೋಕದಲ್ಲಿ ಸಂಚಲನ ಮೂಡಿಸುತ್ತಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ಹೊಸ ಟೆಸ್ಲಾ ಸ್ಮಾರ್ಟ್‌ಫೋನ್‌ನ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.
ಟೆಸ್ಲಾ ಫೋನ್ ವಿಶೇಷವೆಂದರೆ ಸೌರಶಕ್ತಿಯಿಂದ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆಯಂತೆ. ಎಲಾನ್ ಮಸ್ಕ್ ಪರಿಸರದ ಬಗ್ಗೆ ಯಾವಾಗಲೂ ವಿಶೇಷ ಕಾಳಜಿ ವಹಿಸುತ್ತಾರೆ. ಹೀಗಾಗಿ ಸೌರ ಚಾರ್ಜಿಂಗ್ ವೈಶಿಷ್ಟ್ಯವು ಈ ಫೋನಿನ ಪ್ರಮುಖ ಹೈಲೈಟ್ ಎಂಬ ಮಾತು ಹರಿದಾಡುತ್ತಿದೆ.
ಟೆಸ್ಲಾ ಕಂಪನಿಯು ಈಗಾಗಲೇ ಸೋಲಾರ್ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ಮಸ್ಕ್ ಒಡೆತನದ ಕಂಪನಿಯಾದ SpaceX ಒದಗಿಸಿದ ಸ್ಟಾರ್ ಲಿಂಕ್ ಮಾದರಿಯನ್ಮು ಫೋನ್‌ನಲ್ಲಿ ಬಳಸಲಾಗುತ್ತದೆ. ಇದು ವೇಗದ ಉಪಗ್ರಹ ಆಧಾರಿತ ವಿಶಾಲ ಬ್ರಾಂಡ್ ಆಗಿದೆ. 5G ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಈ ಫೋನ್ ಕವರೇಜ್ ಹೊಂದಿದೆ.
ಈ ಫೋನ್ ಬ್ರೈನ್-ಮೆಷಿನ್-ಇಂಟರ್‌ಫೇಸ್ (BMI) ಚಿಪ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ ನಾವು ನಮ್ಮ ಆಲೋಚನೆಗಳೊಂದಿಗೆ ಸಾಧನಗಳನ್ನು ನಿಯಂತ್ರಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ. ಈ ಫೋನಿನ ಬೆಲೆ ಸುಮಾರು 100 ಡಾಲರ್ ಇರಲಿದೆ ಎಂದು ವರದಿಯಾಗಿದೆ.
ವಾಯುಪಡೆಯ ಯುದ್ಧ ವಿಮಾನ ಮಿಗ್ 29 ಪತನ, ಜಿಗಿದು ಜೀವ ಉಳಿಸಿಕೊಂಡ ಪೈಲಟ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ, ತಹಸೀಲ್ದಾರ್ ಕಿರುಕುಳ ಆರೋಪ: ಕಚೇರಿಯಲ್ಲೇ ಸರ್ಕಾರಿ ನೌಕರ ಆತ್ಮ*ಹತ್ಯೆ
ಎಡಿಜಿಪಿ ಚಂದ್ರಶೇಖರ್ ದೂರು: ಎಚ್‌ಡಿಕೆ, ನಿಖಿಲ್, ಸುರೇಶ್‌ಬಾಬು ವಿರುದ್ಧ ಎಫ್ಐಆರ್