newsics.com
ಬೆಳಗಾವಿ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿನ ದ್ವಿತೀಯ ದರ್ಜೆ ಸಹಾಯಕನೊಬ್ಬ ತಹಸೀಲ್ದಾರ್ ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ
ಇಲ್ಲಿನ ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿಯೇ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಶರಣಾಗಿದ್ದು, ತಹಶೀಲ್ದಾರ್ ಬಸವರಾಜ ನಾಗರಾಳ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು ಕಿರುಕುಳ ಕಾರಣ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಿರಿಯ ಅಧಿಕಾರಿಗಳು ಇರುವ ವಾಟ್ಸ್ಯಾಪ್ ಗ್ರೂಪ್ ನಲ್ಲಿ ಬೆಳಗ್ಗೆ ಮೆಸೇಜ್ ಮಾಡುವ ಮೂಲಕ ತಹಸೀಲ್ದಾರ್ ಹಾಗೂ ಸಚಿವೆ ಹೆಬ್ಬಾಳಕರ ಆಪ್ತ ಸಹಾಯಕ ಸೋಮು ಎಂಬಾತನ ಹೆಸರು ಉಲ್ಲೇಖಿಸಿದ್ದಾನೆ.
ಕೆಲಸದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಮತ್ತು ಸೋಮು ಅವರ ಕಿರುಕುಳ ಕಾರಣ ಎನ್ನಲಾಗಿದೆ. ಅಲ್ಲದೇ ರುದ್ರಣ್ಣ ಅವರನ್ನು ಬೆಳಗಾವಿ ತಹಸೀಲ್ದಾರರ ಕಚೇರಿಯಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಅಡಳಿತ ಮಂಡಳಿಗೆ ನಿನ್ನೆಯೇ ಜಿಲ್ಲಾಧಿಕಾರಿಗಳು ವರ್ಗಾವಣೆ ಮಾಡಿದ್ದರು. ತನ್ನ ವರ್ಗಾವಣೆ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ರುದ್ರಣ್ಣ ಬರೆದುಕೊಂಡು ತಹಸೀಲ್ದಾರರ ಕಚೇರಿಯ ವಾಟ್ಸ್ಯಾಪ್ ಗ್ರೂಪ್ ನಲ್ಲಿಯೂ ಚರ್ಚೆ ನಡೆಸಿ ಬಳಿಕ ಅದನ್ನು ಡಿಲೀಟ್ ಮಾಡಿದ್ದ ಎನ್ನುವ ಮಾಹಿತಿ ಇದ್ದು ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಎಡಿಜಿಪಿ ಚಂದ್ರಶೇಖರ್ ದೂರು: ಎಚ್‌ಡಿಕೆ, ನಿಖಿಲ್, ಸುರೇಶ್‌ಬಾಬು ವಿರುದ್ಧ ಎಫ್ಐಆರ್
ಮಾರುಕಟ್ಟೆಗೆ ಬಂತು ಹೊಸ ರೂಪದ ಟಾಟಾ ನ್ಯಾನೋ ಕಾರು, ಫುಲ್ ಡಿಫರೆಂಟ್ ಲುಕ್