newsics.com
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಜಾಮೀನಿಗಾಗಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ರು. ಇಂದು ವಿಚಾರಣೆ ನಡೆಸಿದ ಕೋರ್ಟ್ ದರ್ಶನ್ ಬೇಲ್ ವಿಚಾರಣೆಯನ್ನು ಮುಂದೂಡಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಚಾರಣಾಧೀನ ಕೈದಿಯಲ್ಲಿ ಜೈಲು ಸೇರಿದ್ದಾರೆ. ಇಬ್ಬರೂ ಜೈಲುಪಾಲಾಗಿ 3 ತಿಂಗಳು ಕಳೆದಿದ್ದು, ಇದೀಗ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರು. ಇದೀಗ ದರ್ಶನ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿಕೆ ಆಗಿದೆ.
ದರ್ಶನ್ ಪರ ವಕೀಲರ ವಾದ:
ದರ್ಶನ್ ಹೇಳಿಕೆ ಆಧರಿಸಿ ಸಾಕ್ಷ್ಯ ಸಂಗ್ರಹಿಸಿದ್ದಾಗಿ ಹೇಳಲಾಗಿದೆ. ಆದ್ರೆ ಸಾಕ್ಷ್ಯ ಗಮನಿಸಿದ್ರೆ ಪ್ರಾಸಿಕ್ಯೂಷನ್ ಆರೋಪಗಳು ಸುಳ್ಳು ಎಂದು ಅನಿಸುತ್ತದೆ. ಸಾಕ್ಷ್ಯಾಧಾರಗಳನ್ನು ಸೃಷ್ಟಿಸುವ ಕೆಲಸವಾಗಿರುವುದು ಕಂಡುಬರುತ್ತಿದೆ . ಇತರ ಆರೋಪಿಗಳ ಮೊಬೈಲ್ ಸಂದೇಶಕ್ಕೂ ದರ್ಶನ್ಗೂ ಯಾವುದೇ ಸಂಬಂಧವಿಲ್ಲ. ಕೃತ್ಯಕ್ಕೂ ಮೊಬೈಲ್ ಸಂದೇಶಗಳಿಗೂ ಸಂಬಂಧವಿಲ್ಲ. ಸಿಸಿಟಿವಿ ದೃಶ್ಯಾವಳಿ ಸತ್ಯವೆಂದು ನಂಬಿದ್ರೂ ದರ್ಶನ್ ಪಾತ್ರ ಸಾಬೀತಾಗುತ್ತಿಲ್ಲ ಹೀಗಾಗಿ ದರ್ಶನ್ ಅವರಿಗೆ ಬೇಲ್ ನೀಡುವಂತೆ ದರ್ಶನ್ ಪರ ವಕೀಲರು ವಾದ ಮಂಡಿಸಿದ್ರು. ಆದ್ರೆ ದರ್ಶನ್ಗೆ ಬೇಲ್ ಸದ್ಯಕ್ಕೆ ಸಿಕ್ಕಿಲ್ಲ