newsics.com
ಕೌಲಾಲಂಪುರ: ಭಾರತಕ್ಕೆ ಹೋಗುವುದು ನನಗೆ ತುಂಬಾ ಸುಲಭ; ಆದರೆ ಅಲ್ಲಿಂದ ಹೊರಬರುವುದು ಕಷ್ಟ ಎಂದು ಭಾರತಕ್ಕೆ ಬೇಕಾಗಿರುವ ಹಾಗೂ ಬಂಧನ ಭೀತಿಯಿಂದ ಮಲೇಷಿಯಾಕ್ಕೆ ಪರಾರಿಯಾಗಿರುವ ಭಯೋತ್ಪಾದಕರ ಸ್ಫೂರ್ತಿಯ ಮೂಲ ಡಾ.ಝಾಕಿರ್ ನಾಯಿಕ್ ಹೇಳಿದ್ದಾನೆ.
ಪಾಕಿಸ್ತಾನಿ ಯೂಟ್ಯೂಬರ್ ನಾದಿರ್ ಅಲಿ ಇತ್ತೀಚೆಗೆ ನಡೆಸಿದ ಸಂದರ್ಶನದಲ್ಲಿ ಝಾಕಿರ್ ನಾಯಿಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ಭಾರತಕ್ಕೆ ಮರಳುವ ಬಗ್ಗೆ ನಾದಿರ್ ಅಲಿ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಝಾಕಿರ್ ನಾಯಿಕ್ ಈ ಹೇಳಿಕೆ ನೀಡಿದ್ದಾನೆ.
ಭಾರತವು 2016ರಲ್ಲಿ ಝಾಕಿರ್ ನಾಯಿಕ್ ಅವನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಅನ್ನು ನಿಷೇಧಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯು ಅವನ ವಿರುದ್ಧ ‘ಯುಎಪಿಎ’ ಕಾಯ್ದೆಯಡಿ ಅಪರಾಧವನ್ನೂ ದಾಖಲಿಸಿದೆ.
“ನಾನು ಭಾರತಕ್ಕೆ ಹೋದ ಬಳಿಕ ನನಗೆ ‘ರೆಡ್ ಕಾರ್ಪೆಟ್’ ಹಾಸಲಾಗುತ್ತದೆ. (ಸ್ವಾಗತಿಸಲಾಗುತ್ತದೆ) ಮತ್ತು ‘ಒಳಗೆ ಬಂದು ಜೈಲಿನಲ್ಲಿ ಕುಳಿತುಕೊಳ್ಳಿ’ ಎಂದು ಹೇಳಲಾಗುತ್ತದೆ” ಎಂದು ಝಾಕಿರ್ ನಾಯಿಕ್ ಹೇಳಿದ್ದಾನೆ.
ಭಾರತದ ಪಟ್ಟಿಯಲ್ಲಿ ನಾನೇ ಮೊದಲ ಕ್ರಮಾಂಕದ ಭಯೋತ್ಪಾದಕನಾಗಿದ್ದೇನೆ. ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳಾಗಿವೆ. ಆ ಯಾವುದೇ ಆರೋಪಗಳು ಸಾಬೀತಾಗಿಲ್ಲ. “ಬಾಂಗ್ಲಾದೇಶದ ಒಬ್ಬ ಭಯೋತ್ಪಾದಕ ನನ್ನ ಫೇಸ್ಬುಕ್ ಅನುಯಾಯಿ(ಫಾಲೊವರ್ಸ್) ಆಗಿದ್ದ ಮತ್ತು ಅವನು ನನ್ನಿಂದ ಪ್ರೇರಿತನಾಗಿದ್ದನು” ಎಂದು ಹೇಳಲಾಗಿದೆ. ಸ್ಫೂರ್ತಿ ನೀಡುವುದು ಮತ್ತು ಅನುಯಾಯಿಯಾಗಿರುವುದು(ಫಾಲೊವರ್ಸ್) ಎರಡು ವಿಭಿನ್ನ ವಿಷಯಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾನೆ.
ಎರಡೂವರೆ ಕೋಟಿಯ ಲೆಕ್ಸಸ್ ಕಾರಿಗೆ ಭಾರತದಲ್ಲಿ ಭಾರೀ ಬೇಡಿಕೆ: ಬುಕಿಂಗ್ ತಾತ್ಕಾಲಿಕ ಸ್ಥಗಿತ!