newsics.com
ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ರೋಡ್ ರೇಜ್ ಘಟನೆಗಳು ಹೆಚ್ಚುತ್ತಿವೆ. ಐಜಿಪಿ ರಮೇಶ್ ಬಾನೋತ್ ಮಗನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಬ್ಯಾಟರಾಯನಪುರದಲ್ಲಿ ನಡೆದಿದೆ.
ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಐಪಿಎಸ್ ಅಧಿಕಾರಿ ರಮೇಶ್ ಬಾನೋತ್ ಅವರ ಪುತ್ರ ಶ್ರೀಸಾಯಿ ಪ್ರೀತಂ ಬಾನೋತ್ ಮೇಲೆ ಹಲ್ಲೆ ನಡೆಸಲಾಗಿದೆ.
ಬ್ಯಾಟರಾಯನಪುರ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದ್ದ ವೇಳೆ ಬ್ಲೂ ಬಣ್ಣದ ಕಾರಿನಲ್ಲಿ ಬಂದ ಇಬ್ಬರು, ಹಾರ್ನ್ ಮಾಡಿ ಕಿರಿಕಿರಿ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಕಾರನ್ನು ತಡೆದ ಇಬ್ಬರು ದುಷ್ಕರ್ಮಿಗಳು, ಪ್ರೀತಂ ಬಾನೋತ್ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಗುದ್ದಿದ್ದಾರೆ.
ಹಲ್ಲೆ ಬಳಿಕ ಇಬ್ಬರು ದುಷ್ಕರ್ಮಿಗಳು ಪಾರಾಗಿದ್ದಾರೆ. ಪ್ರೀತಂ ಬಾನೋತ್ ಗಂಭೀರವಾಗಿ ಗಾಯಗೊಂಡಿದ್ದಾರೆ.
https://www.newsics.com/2024/09/21/illegal-denotification-case-lokayukta-summons-bsy-another-hardship-for-former-cm-5/