newsics. com
ಹೈದ್ರಾಬಾದ್: ಜೂ ಎನ್ಟಿಆರ್ ಅಭಿಮಾನಿಯೊಬ್ಬರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಯುವಾಗ ಎಚ್ಚರವಾಗಿರಲು ಮತ್ತು ಗಾಬರಿಯಾಗದೆ ಸಾಮಾನ್ಯ ಸ್ಥಿತಿಯಲ್ಲಿರಲು ತಮ್ಮ ಮೆಚ್ಚಿನ ಸಿನಿಮಾ ವೀಕ್ಷಿಸಿದ್ದಾರೆ.ಆಂಧ್ರ ಪ್ರದೇಶದ ಈಸ್ಟ್ ಗೋಧಾವರಿ ಜಿಲ್ಲೆಯ 55 ವರ್ಷದ ಮಹಿಳೆ ಅನಂತಲಕ್ಷ್ಮಿ ಎಂಬುವರಿಗೆ ಇತ್ತೀಚೆಗೆ ತುಸು ಸಂಕೀರ್ಣವಾದ ಮೆದುಳಿನ ಶಸ್ತ್ರ ಚಿಕತ್ಸೆ ಮಾಡಲಾಯ್ತು. ಈ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಅನಂತಲಕ್ಷ್ಮಿ ಎಚ್ಚರವಿರಬೇಕಿತ್ತು ಹಾಗೂ ಗಾಬರಿ ಆಗದಂತೆ ಸಾಮಾನ್ಯ ಸ್ಥಿತಿಯಲ್ಲಿ ಇರುವುದು ಮುಖ್ಯವಾಗಿತ್ತು.55 ವರ್ಷದ ಅನಂತಲಕ್ಷ್ಮಿ ಜೂ ಎನ್ಟಿಆರ್ ಅಭಿಮಾನಿಯಾಗಿದ್ದು, ಮೆದುಳು ಶಸ್ತ್ರಚಿಕಿತ್ಸೆ ಸಮಯದಲ್ಲಿ ಜೂ ಎನ್ಟಿಆರ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಅದುರ್ಸ್’ ಅನ್ನು ಟ್ಯಾಬ್ಲೆಟ್ನಲ್ಲಿ ವೀಕ್ಷಿಸಿದ್ದಾರೆ. ಅನಂತಲಕ್ಷ್ಮಿ ಸಿನಿಮಾ ನೋಡುವ ಸಮಯದಲ್ಲಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕತ್ಸೆ ಮಾಡಿದ್ದಾರೆ ವೈದ್ಯರು.