newsics.comಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಮತ್ತು ವೇಲುಗೆ 3 ದಿನ ಪೊಲೀಸ್ ಕಸ್ಟಡಿ ನೀಡಿ ಬೆಂಗಳೂರಿನ 9ನೇ ಅಪರ ಮುಖ್ಯ ನ್ಯಾಯಾಧೀಶರ ಆದೇಶ ಹೊರಡಿಸಲಾಗಿದೆ.ನಾಗ ಮತ್ತು ವೇಲು ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಪೊಲೀಸರು, ಜೈಲಿನ ಒಳಗೆ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಮೊಬೈಲ್ಗಳು ಪತ್ತೆಯಾಗಿದೆ. ಇನ್ನೂ ಕೆಲ ಮೊಬೈಲ್ ಪತ್ತೆಮಾಡಬೇಕಿದೆ.ಹೀಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು.ಇಂದಿನಿಂದ ಸೆ.21ರ ಸಂಜೆ 4.30ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದ್ದು, ಅಷ್ಟರೊಳಗೆ ಕೋರ್ಟ್ಗೆ ಹಾಜರುಪಡಿಸಲು ಸೂಚಿಸಲಾಗಿದೆ.