newsics.com
ಹಿಮಾಚಲ ಪ್ರದೇಶ ನಿಮ್ಮ ಡೆಸ್ಟಿನೇಷನ್ ಆಗಿದ್ರೆ ಒಂದು ವಾರ ಹಿಮಾಚಲದಲ್ಲಿ ಟ್ರಿಪ್ ಮಾಡೋದು ಹೇಗೆ, ಎಲ್ಲೆಲ್ಲಿಗೆ ಹೋಗಬಹುದು ಎಂಬ ಟ್ರಿಪ್ ಪ್ಲ್ಯಾನ್ ಅನ್ನು ನೀಡ್ತಿದ್ದೇವೆ ನೋಡಿ.
ಹಿಮಾಚಲ ಪ್ರದೇಶದಲ್ಲಿ 7 ದಿನಗಳ ಟ್ರಿಪ್
ಚಂಡೀಗಢದಿಂದ ಶಿಮ್ಲಾಗೆ 112 ಕಿಮೀ, ರಸ್ತೆ ಮೂಲಕ ಹೋದ್ರೂ ನಿಮಗೆ ಏನಿಲ್ಲವಂದರೂ ಎರಡೂವರೆ ತಾಸು ಬೇಕಾಗುತ್ತದೆ. ನೀವು ದೆಹಲಿಯಿಂದ ಹೊರಟು ಚಂಡೀಗಢದ ಮೂಲಕ ಹೋಗಬಹುದು, ಆದರೆ ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ದಿನ 2 – ಶಿಮ್ಲಾ
ಹಿಮಾಚಲ ಪ್ರದೇಶದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದು ಶಿಮ್ಲಾ. ಇಲ್ಲಿ ಟಾಯ್ ಟ್ರೈನ್ ಆನಂದಿಸಬಹುದು, ಹಸಿರು, ಬೆಟ್ಟಗಳನ್ನು ನೋಡಬಹುದು. ಪ್ರಕೃತಿಯನ್ನು ಸವಿಯಲು ಹಿಮಾಚಲ ಪ್ರದೇಶದ ಶಿಮ್ಲಾ ಬೆಸ್ಟ ಪ್ಲೇಸ್.
ದಿನ 3 – ಮಶೋಬ್ರಾಗೆ ಒನ್ ಡೇ ಟ್ರಿಪ್
ಮಶೋಬ್ರಾ ಶಿಮ್ಲಾದಿಂದ ಕೇವಲ 10 ಕಿಮೀ ದೂರದಲ್ಲಿದೆ, ಮತ್ತು ನೀವು ಒಂದು ದಿನದ ಪ್ರವಾಸಕ್ಕಾಗಿ ಈ ಉತ್ತಮ ತಾಣಕ್ಕೆ ಹೋಗಿ ಬರಬಹುದು.
ದಿನ 4 – ಶಿಮ್ಲಾದಿಂದ ಮನಾಲಿ
ಹಿಮಾಚಲ ಪ್ರದೇಶದಲ್ಲಿ ನಾಲ್ಕನೇ ದಿನದಂದು ವಿಶ್ವ ಪ್ರಸಿದ್ಧ ಮನಾಲಿಗೆ ಭೇಟಿ ನೀಡಬಹುದು. ಶಿಮ್ಲಾದಿಂದ ಬೇಗ ಹೊರಟರೆ ಸುಮಾರು 6 ಗಂಟೆಗಳಲ್ಲಿ ಮನಾಲಿಗೆ ಹೋಗಿ ತಲುಪಬಹುದು.
ದಿನ 5 – ಸೋಲಾಂಗ್ ಕಣಿವೆ, ಬಿಯಾಸ್ ನದಿ
ಮನಾಲಿಗೆ ಬರುವವರು ಸೋಲಾಂಗ್ ಕಣಿವೆಗೆ ಭೇಟಿ ನೀಡಬೇಕು. ಈ ಗಮ್ಯಸ್ಥಾನವು ಪ್ರವಾಸಿಗರಿಗೆ ನಿಜವಾಗಿಯೂ ಆಕರ್ಷಕವಾಗಿದ್ದು, ಕಣಿವೆಯವರೆಗಿನ ಡ್ರೈವ್ ಇನ್ನೂ ಅದ್ಭುತವಾಗಿರುತ್ತದೆ.
ದಿನ 6- ಕಸೋಲ್
ಮನಾಲಿ ನಂತರ ಮತ್ತೊಂದು ರಮಣೀಯ ಜಾಗ ಎಂದರೆ ಅದು ಕಸೋಲ್. ಇದು ಮನಾಲಿಯಿಂದ ಕೇವಲ 2 ಗಂಟೆಗಳ ಪ್ರಯಾಣದ ದೂರದಲ್ಲಿದೆ ಮತ್ತು ಪ್ರಕೃತಿಯ ಸೌಂದರ್ಯವನ್ನು ಹೊತ್ತುಕೊಂಡ ಜಾಗ ಅಂತಾನೇ ಹೇಳಬಹುದು.
ದಿನ 7 – ರಿಟರ್ನ್
ನಿಮ್ಮ ಹಿಮಾಚಲಪ್ರದೇಶದ ಕೊನೆಯ ದಿನವಿದು, ಬೇಗ ಇಲ್ಲಿಂದ ಹೊರಟು ಕಲ್ಕಾ ರೈಲು ನಿಲ್ದಾಣಕ್ಕೆ ಹೋಗಿ. ಅಲ್ಲಿಂದ ನೀವು ದೆಹಲಿಗೆ ಅಥವಾ ಪೂರ್ವ ಭಾರತದ ಹೌರಾ ರೈಲಿನಲ್ಲಿ ಪ್ರಯಾಣ ಮಾಡಬಹುದು.