newsics.com
ಶ್ರೀನಗರ: ವಿಧಾನಸಭಾ ಚುನಾವಣೆಗಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜಮ್ಮು-ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡುವ ಭರವಸೆ ನೀಡಿದೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಮೆಹಬೂಬಾ ಮುಫಿ ಮತ್ತು ಇತರ ಹಿರಿಯ ನಾಯಕರು ‘ಜನರ ಆಕಾಂಕ್ಷೆ’ (ಪೀಪಲ್ಸ್ ಆಸ್ಪಿರೇಷನ್) ಎಂಬ ಪ್ರಣಾಳಿಕೆ ಬಿಡುಗಡೆಗೊಳಿಸಿದರು.
ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು
* ಸಾರ್ವಜನಿಕ ಸುರಕ್ಷತಾ ಕಾಯ್ದೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಶತ್ರು ಕಾಯ್ದೆ ಸೇನಾಪಡೆಗಳ ವಿಶೇಷ ಅಧಿಕಾರ ಕಾಯ್ದೆಯ ಮರುಜಾರಿ
* ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಉಚಿತ ನೀರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರ್ಷಕ್ಕೆ 12 ಗ್ಯಾಸ್ ಸಿಲಿಂಡರ್ ಉಚಿತವಾಗಿ ವಿತರಣೆ ಎಲ್ಲ ಕುಟುಂಬಗಳಿಗೆ ಆಸ್ತಿ ತೆರಿಗೆ ರದ್ದತಿ ಮತ್ತು ಆಸ್ತಿ ಖರೀದಿಸುವ ಮಹಿಳೆಯರಿಗೆ ಮುದ್ರಾಂಕ ಶುಲ್ಕ ರದ್ಧತಿ
* ಭಯೋತ್ಪಾದನೆಯ ಆರೋಪದಡಿ ಸರ್ಕಾರಿ ನೌಕರರನ್ನು ವಜಾಗೊಳಿಸಿರುವುದು ಮತ್ತು ಉದ್ಯೋಗ ಕಡಿತದ ಪ್ರಕರಣಗಳ ಮರುಪರಿಶೀಲನೆ. ಅಧಿಕಾರಕ್ಕೇರಿದ ಒಂದು ವರ್ಷದ ಒಳಗಾಗಿ ಖಾಲಿ ಇರುವ ಎಲ್ಲ ಸರ್ಕಾರಿ ಹುದ್ದೆಗಳ ಭರ್ತಿಗೊಳಿಸುವುದು. 60 ಸಾವಿರ ದಿನಗೂಳಿ ನೌಕರರನ್ನು ಕಾಯಂಗೊಳಿಸುವುದು. ಪ್ರವಾಸೋದ್ಯಮ ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದು