newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
22-08-2024, ಗುರುವಾರ
ದಿನ ವಿಶೇಷ:
* ಸಂಕಷ್ಟಹರ ಚತುರ್ಥಿ
* ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವ, ಮಂತ್ರಾಲಯ.
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 22/08/2024
ತಿಂಗಳು – ಆಗಸ್ಟ್
ಬಣ್ಣ – ಹಸಿರು
ವಾರ – ಗುರುವಾರ
ತಿಥಿ – ತೃತೀಯ 13:45:31
ಪಕ್ಷ – ಕೃಷ್ಣ
ನಕ್ಷತ್ರ – ಉತ್ತರಾಭಾದ್ರ 22:04:34
ಯೋಗ – ಧೃತಿ 13:09:08
ಕರಣ – ವಿಷ್ಟಿ (ಭದ್ರ) 13:45:31
ಕರಣ – ಭವ 24:09:45*
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ಮೀನ
ಸೂರ್ಯ ರಾಶಿ ಸಿಂಹ
ಋತು – ವರ್ಷ
ಸೂರ್ಯೋದಯ 06:09:10
ಸೂರ್ಯಾಸ್ತ 18:35:27
ಹಗಲಿನ ಅವಧಿ 12:26:16
ರಾತ್ರಿಯ ಅವಧಿ 11:33:47
ಚಂದ್ರಾಸ್ತ 08:26:06
ಚಂದ್ರೋದಯ 20:46:36
ರಾಹು ಕಾಲ 13:56 – 15:29 ಅಶುಭ
ಯಮಗಂಡ ಕಾಲ 06:09 – 07:42 ಅಶುಭ
ಗುಳಿಕ ಕಾಲ 09:16 – 10:49
ಅಭಿಜಿತ್ 11:57 – 12:47 ಶುಭ
ದುರ್ಮುಹೂರ್ತ 10:18 – 11:08 ಅಶುಭ
ದುರ್ಮುಹೂರ್ತ 15:16 – 16:06 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ನಮ್ಮ ಆಲೋಚನೆಗಳನ್ನು ಬದಲಾಯಿಸಿದರೆ ಸಾಕು. ನಮ್ಮ ಪ್ರಪಂಚ ತನ್ನಷ್ಟಕ್ಕೆ ತಾನೇ ಬದಲಾಗುತ್ತದೆ.
– ನಾರ್ಮನ್ ವಿನ್ಸೆಂಟ್ ಪೀಲೆ
***
ಈ ದಿನದ ಸುಭಾಷಿತ
ಸಭಾ ಯತ್ರ ಸಭ್ಯೋಽಸ್ತಿ
ಸ ಸಭ್ಯೋ ಧರ್ಮಮಾಹ ಯಃ |
ಸ ಧರ್ಮೋ ಯತ್ರ ಸತ್ಯಂ ಸ್ಯಾತ್
ತತ್ಸತ್ಯಂ ಯತ್ರ ನ ಚ್ಛಲಮ್ ||
(ಕಥಾಸರಿತ್ಸಾಗರ)
ಸಭ್ಯನಿದ್ದರೆ ಮಾತ್ರ ಸಭೆಯೆನಿಸುವುದು. ಧರ್ಮವನ್ನು ಹೇಳುವಾತನೇ ಸಭ್ಯನು. ಸತ್ಯವೆಲ್ಲಿದೆಯೋ ಅದೇ ಧರ್ಮ. ಮೋಸವೆಲ್ಲಿಲ್ಲವೋ ಅದುವೇ ಸತ್ಯ.
***
ಇಂದಿನ ಇತಿಹಾಸ
* ಭಾರತದ ಮೊದಲ ಗವರ್ನರ್ ಜನರಲ್ ಆಗಿದ್ದ ವಾರ ವಾರನ್ ಹೇಸ್ಟಿಂಗ್ಸ್ ಅವರು 1818 ರ ಆಗಸ್ಟ್ 22 ರಂದು ನಿಧನರಾದರು.
* ಆನಂದ ಕೆ. ಕುಮಾರಸ್ವಾಮಿ – ಆನಂದ ಕೆ. ಕುಮಾರಸ್ವಾಮಿ ಅವರು ಭಾರತೀಯ ತತ್ವಶಾಸ್ತ್ರವನ್ನು ವಿಶ್ವದೆಲ್ಲೆಡೆ ಪರಿಚಯಿಸಿದ ಆಗ್ರಗಣ್ಯರಲ್ಲಿ ಒಬ್ಬರೆನಿಸಿದ್ದಾರೆ. ಆನಂದ ಕೆಂಟಿಷ್ ಕುಮಾರಸ್ವಾಮಿ, 1877 ರ ಆಗಸ್ಟ್ 22 ರಂದು ಅಂದಿನ ಬ್ರಿಟಿಷ್ ಆಡಳಿತದಲ್ಲಿದ್ದ ಕೊಲಂಬೋದಲ್ಲಿ ಜನಿಸಿದರು. ಭಾರತೀಯ ಕಲಾ ಇತಿಹಾಸಕಾರರಾದ ಇವರು ಭಾರತೀಯ ಸಂಸ್ಕೃತಿಯನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಮುಂಚೂಣಿಯ ಇತಿಹಾಸಕಾರರು.
* ಆಗಸ್ಟ್ 22, 1982 ರಂದು, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸುಧಾರಕ ಏಕನಾಥ ರಾಮಕೃಷ್ಣ ರಾನಡೆ ಅವರು ನಿಧನರಾದರು.
* ಆಗಸ್ಟ್ 22, 1993 ರಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ನಿಧನರಾದರು.