newsics.com
ನವನವೀನ ಚಿತ್ರಗಳಿಂದ ಗಮನಸೆಳೆದಿರುವ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪುರುಷರ ಮಾಫಿಯಾ ಕಪಿಮುಷ್ಟಿಯಲ್ಲಿದೆ. ಯಾರನ್ನು ಸಿನಿಮಾಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಇದೇ ಗುಂಪು ನಿಯಂತ್ರಿಸುತ್ತದೆ ಎಂದು ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ। ಹೇಮಾ ಸಮಿತಿ ಸ್ಫೋಟಕ ವರದಿ ನೀಡಿದೆ.
ಸೆಕ್ಸ್ ಗೆ ಒಪ್ಪಿದರೆ ಮಾತ್ರ ಜೂನಿಯರ್ ನಟರಿಗೆ ಸಿನಿಮಾದಲ್ಲಿ ಅವಕಾಶ ನೀಡಲಾಗುತ್ತದೆ. ಚಿತ್ರರಂಗದಲ್ಲಿ ಮುಂದುವರಿಯಬೇಕಾದರೆ ಎಲ್ಲದಕ್ಕೂ ಅಡ್ಜಸ್ಟ್ ಮಾಡಿಕೊಳ್ಳಬೇಕು ಹಾಗೂ ರಾಜಿ ಮಾಡಿಕೊಳ್ಳಬೇಕು ಎಂದು ಕಿರಿಯ ನಟರೇ ತನಗೆ ತಿಳಿಸಿದ್ದಾರೆ ಎಂಬ ಮಾಹಿತಿ ವರದಿಯಲ್ಲಿದೆ. 233 ಪುಟಗಳ ವರದಿಯನ್ನು ಆರ್‌ಟಿಐನಡಿ ಬಿಡುಗಡೆ ಮಾಡಲಾಗಿದ್ದು, ಸಂಚಲನಕ್ಕೆ ಕಾರಣವಾಗಿದೆ.
ಮಲಯಾಳ ಚಿತ್ರರಂಗದಲ್ಲಿ ‘ಕಾಸ್ಟಿಂಗ್ ಕೌಚ್’ (ಸಿನಿಮಾದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸುವುದು) ಇದೆ. ತಮಗೆ ಯಾರು ಸಹಕರಿಸುತ್ತಾರೋ ಅವರನ್ನು ಒಂದು ಗುಂಪು ಮಾಡಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಮಲಯಾಳ ಚಿತ್ರರಂಗ ಕ್ರಿಮಿನಲ್ ಹಾಗೂ ಸ್ತ್ರೀದ್ವೇಷಿಗಳಿಂದ ಪ್ರಭಾವಿತವಾಗಿದೆ. 15 ಮಂದಿಯ ಮಾಫಿಯಾ ತಮ್ಮ ವಿರುದ್ಧ ದನಿ ಎತ್ತುವವರ ಭವಿಷ್ಯವನ್ನೇ ಹಾಳು ಮಾಡುವ ಶಕ್ತಿ ಹೊಂದಿದೆ. ಈ ಮಾಫಿಯಾದಲ್ಲಿ ಪ್ರಮುಖ ನಟರೂ ಇದ್ದಾರೆ ಎಂದು ಹೇಳಿದೆ.