newsics.com
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ ಸೆರೆವಾಸದಲ್ಲಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರು ಪೊಲೀಸರು ಯಾವಾಗ ತನಿಖೆ ಮುಗಿಸುತ್ತಾರೆ. ತನಿಖೆ ಮುಗಿದ ಮೇಲೆ ಚಾರ್ಜ್‌ಶೀಟ್ ಯಾವಾಗ ಸಲ್ಲಿಸುತ್ತಾರೆ ಅನ್ನೋದನ್ನೇ ಕಾಯುತ್ತಿದ್ದಾರೆ. ಯಾಕಂದ್ರೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸದ ಮೇಲೆ ದರ್ಶನ್ ಅವರು ಜಾಮೀನಿಗಾಗಿ ಕೋರ್ಟ್ ಕದತಟ್ಟಲಿದ್ದಾರೆ.
ಎಲ್ಲಾ ಆಯಾಮಗಳನ್ನು ಪರಶೀಲಿಸುತ್ತಿರುವ ಖಾಕಿ ಪಡೆ ಸಣ್ಣದೊಂದು ಸಾಕ್ಷಿಯನ್ನು ಬಿಡದೆ ಕಲೆ ಹಾಕುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಈಗ ಮತ್ತೊಂದು ಸ್ಫೋಟಕ ಅಂಶ ಬಯಲಾಗಿದೆ.
FSL ವರದಿಯಲ್ಲಿ ದರ್ಶನ್ ಬಟ್ಟೆಗಳ ಮೇಲೆ ಕೊಲೆಯಾದ ರೇಣುಕಾಸ್ವಾಮಿ ದೇಹದ ರಕ್ತದ ಕಲೆಗಳು ಪತ್ತೆಯಾಗಿದೆ. ಈ ಅತಿ ದೊಡ್ಡ ಸಾಕ್ಷ್ಯ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ಗೆ ಕಂಟಕವಾಗಲಿದೆ. ಕೊಲೆಯಾದ ಮೇಲೆ ದರ್ಶನ್ ಅವರನ್ನು ಬಂಧಿಸಿದ ಪೊಲೀಸರು ಅವರ ಮನೆಯಲ್ಲಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ರೌಂಡ್ ನೆಕ್ ಶರ್ಟ್ ಅನ್ನು ವಶಪಡಿಸಿಕೊಂಡಿದ್ದರು. ಅದನ್ನು ಎಫ್‌ಎಸ್‌ಎಲ್ ಪೊಲೀಸರು ಕಳುಹಿಸಿದ್ದರು.
FSL ಪರಿಶೀಲನೆಯಲ್ಲಿ ದರ್ಶನ್ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವುಗಳು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು FSL ವರದಿಯಲ್ಲಿ ದೃಢಪಟ್ಟಿದೆ. ಈ ಸಾಕ್ಷ್ಯದಿಂದ ರೇಣುಕಾಸ್ವಾಮಿ ಕೊಲೆಯಲ್ಲಿ ಆರೋಪಿ ದರ್ಶನ್ ಅವರು ಭಾಗಿಯಾಗಿದ್ದಾರೆ ಎನ್ನುವ ಮಹತ್ವಪೂರ್ಣ ಸಾಕ್ಷ್ಯವನ್ನು ಪೊಲೀಸರು ಒದಗಿಸುವ ಸಾಧ್ಯತೆ ಇದೆ. ಈ ಎಫ್‌ಎಸ್‌ಎಲ್ ವರದಿಯನ್ನೇ ಪೊಲೀಸರು ಕೋರ್ಟ್‌ಗೆ ನೀಡಿ ದರ್ಶನ್ ವಿರುದ್ಧ ಮಹತ್ವದ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.