newsics.com
ಶಿರಾಡಿ ಘಾಟ್ ಭೂಕುಸಿತ ಪ್ರದೇಶಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ಹಲವೆಡೆ ಗುಡ್ಡ ಕುಸಿತ ಪ್ರದೇಶಗಳನ್ನು ಪರಿಶೀಲಿಸಿರುವ ಸಿಎಂ, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಸಿಎಂ, ರಾಷ್ಟ್ರೀಯ ಹೆದ್ದಾರಿ 75ರ ಮೇಲ್ಭಾಗದಲ್ಲಿ ಮಣ್ಣು ಸಡಿಲವಾಗಿದೆ. ಹೀಗಾಗಿ ಪದೇಪದೇ ಕುಸಿಯುತ್ತಿದೆ ಎಂದು ಹೇಳಿದ್ದಾರೆ.
ಸಕಲೇಶಪುರ ಭಾಗದಲ್ಲಿ ವಾಡಿಕೆಗಿಂತ ಶೇ.65ರಷ್ಟು ಹೆಚ್ಚು ಮಳೆ ಆಗಿದೆ. ಶಿರಾಡಿಘಾಟ್ನಲ್ಲಿ ಹೆದ್ದಾರಿ ಸರಿಪಡಿಸುವಂತೆ ಪತ್ರ ಬರೆಯುವೆ. ದೆಹಲಿಗೆ ಹೋದಾಗ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಮನವರಿಕೆ ಮಾಡುವೆ ಎಂದು ಹೇಳಿದ್ದಾರೆ.
ಶಿರಾಡಿಘಾಟ್ನಲ್ಲಿ ಮಣ್ಣು ಕುಸಿತದಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗಿದೆ. 1 ಎಸ್ಡಿಆರ್ಎಫ್ ಟೀಮ್ ಇಲ್ಲೇ ನಿಯೋಜನೆ ಮಾಡಿದ್ದೇವೆ. ಬೇಕಿದ್ದರೆ ಹೆಚ್ಚಿನ ಭದ್ರತೆ ವಹಿಸುತ್ತೇವೆ. ಯಾಕೆ ಭೂ ಕುಸಿತ ಆಗುತ್ತಿದೆ ಎಂಬುದದರ ಬಗ್ಗೆ ಅಭಿಪ್ರಾಯ ಪಡೆದು ಕ್ರಮ ವಹಿಸುತ್ತೇವೆ ಎಂದಿದ್ದಾರೆ.