newsics.com
ಹೊಟ್ಟೆ ಹಸಿವನ್ನು ತಾಳಲಾರದೆ ಯುವಕನೊಬ್ಬ ರೈಲ್ವೆ ಕ್ಯಾಂಟೀನ್ ಒಂದರಲ್ಲಿ ಬಿಸ್ಕೆಟ್ ಕದ್ದು ತಿಂದಿರುವ ಘಟನೆ ಛತ್ತೀಸ್‌ಗಢದ ರಾಯ್‌ಪುರದ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಈತ ಒಂದು ಸಣ್ಣ ಬಿಸ್ಕೆಟ್ ಪ್ಯಾಕೆಟ್ ಕದ್ದನೆಂದು ಕ್ಯಾಂಟೀನ್ ನೌಕರರು ಯುವಕನಿಗೆ ಮನ ಬಂದಂತೆ ಥಳಿಸಿ, ನಂತರ ಆತನ ಕಾಲಿಗೆ ಹಗ್ಗ ಕಟ್ಟಿ ಎಳೆದೊಯ್ದು ಅಮಾನವೀಯ ವರ್ತನೆ ತೋರಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕ್ಯಾಂಟೀನ್ ನೌಕರರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮಯಾಂಕ್ ತಿವಾರಿ ಎಂಬ ಯುವಕ ಹಸಿವು ನೀಗಿಸಲು ಕ್ಯಾಂಟೀನ್ ಒಂದರಲ್ಲಿ ಬಿಸ್ಕೆಟ್ ಕದಿಯಲು ಯತ್ನಿಸುತ್ತಿದ್ದಾಗ ಕ್ಯಾಂಟೀನ್ ಮಾಲೀಕನ ಕೈಗೆ ಸಿಕ್ಕಿಬೀಳುತ್ತಾನೆ. ಇದರಿಂದ ಕೋಪಗೊಂಡ ಮಾಲೀಕ ತನ್ನ ನೌಕರರ ಜೊತೆ ಸೇರಿ ಆ ಯುವಕನಿಗೆ ಮನಬಂದಂತೆ ಥಳಿಸಿದ್ದು ಮಾತ್ರವಲ್ಲದೆ, ಆತನ ಕಾಲಿಗೆ ಬಟ್ಟೆ ಕಟ್ಟಿ ಎಳೆದೊಯ್ದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ಯಾಂಟೀನ್ ಮಾಲೀಕ ಅಂಕಿತ್ ಮಿಶ್ರಾ, ನೌಕರರಾದ ಅಶುತೋಷ್ ಶುಕ್ಲಾ, ಸುನಿಲ್ ಶುಕ್ಲಾ ಮತ್ತು ಬಸಂತ್ ಪ್ರಧಾನ್‌ನನ್ನು ಬಂಧಿಸಲಾಗಿದೆ. ರೈಲ್ವೆ ಕ್ಯಾಂಟೀನ್‌ನಲ್ಲಿ ಬಿಸ್ಕೆಟ್ ಕದ್ದನೆಂಬ ಆರೋಪದ ಮೇಲೆ ಯುವಕನಿಗೆ ಕ್ಯಾಂಟೀನ್ ನೌಕರರು ಮನಬಂದಂತೆ ಥಳಿಸಿರುವ ವಿಡಿಯೋ ವೈರಲ್ ಆಗ್ತಿದೆ.