newsics.com
ಬಜೆಟ್‌ನಲ್ಲಿ ಗುಡ್‌ನ್ಯೂಸ್ ಸಿಕ್ಕಿದೆ. ಇನ್ಮುಂದೆ ಮೊಬೈಲ್ ಫೋನ್ ಚಾರ್ಜರ್ ಅಗ್ಗವಾಗಲಿದೆ. ಇದಲ್ಲದೇ ವಿದ್ಯುತ್ ತಂತಿಗಳು ಮತ್ತು ಎಕ್ಸ್ ರೇ ಯಂತ್ರಗಳು ಅಗ್ಗವಾಗಲಿದೆ. ಮೂರು ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ.
ಬಂಗಾರ ಪ್ರಿಯರಿಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದ್ದು, ಇಂದು ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಚಿನ್ನ ಬೆಳ್ಳಿಯ ಮೇಲಿನ ದರವನ್ನು ಇಳಿಕೆ ಮಾಡಿ ಘೋಷಿಸಿದ್ದಾರೆ. ಅಂದರೆ ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದ್ದು, ಈ ಹಿನ್ನೆಲೆ ಬಂಗಾರ ಬೆಳ್ಳಿಯ ದರ ಕಡಿಮೆಯಾಗಲಿದೆ.