newsics.com
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತವಾಗಿ 7ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದಮೇಲೆ ಇದು ಮೊದಲನೇ ಬಜೆಟ್ ಆಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಹೊಸ ಮನೆಗಳನ್ನು ನಿರ್ಮಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ, ಇದರ ಜೊತೆಗೆ ಮಹಿಳೆಯರಿಗೆ 3 ಸಾವಿರ ಕೋಟಿ ರೂಪಾಯಿ ಅನುದಾನ ಇರಿಸಲಿದ್ದು, ಪ್ರಧಾನಮಂತ್ರಿ ಬುಡಕಟ್ಟು ಸುಧಾರಿತ ಗ್ರಾಮ ಅಭಿಯಾನದಡಿ 63000 ಗ್ರಾಮಗಳ 5 ಕೋಟಿ ಆದಿವಾಸಿಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂಪಾಯಿ ಮೀಸಲಿರಿಸಲಾಗುವುದು ಎಂದರು.
ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್‌ರ ಮಹತ್ವದ ಘೋಷಣೆ ಹೀಗಿವೆ
- ಉಚಿತ ಪಡಿತರ ವ್ಯವಸ್ಥೆಯು 5 ವರ್ಷಗಳವರೆಗೆ ಮುಂದುವರಿಯುತ್ತದೆ.
- ಈ ವರ್ಷ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.
- ಉದ್ಯೋಗಕ್ಕಾಗಿ 3 ಪ್ರಮುಖ ಯೋಜನೆಗಳಲ್ಲಿ ಸರ್ಕಾರವು ಕೆಲಸ ಮಾಡುತ್ತದೆ.
- ಬಿಹಾರದಲ್ಲಿ 3 ಎಕ್ಸ್‌ಪ್ರೆಸ್‌ವೇಗಳ ಘೋಷಣೆ.
- ಬಿಹಾರದಲ್ಲಿ ಎಕ್ಸ್‌ಪ್ರೆಸ್‌ವೇಗೆ 26 ಸಾವಿರ ಕೋಟಿ ರೂ.
- ವಿದ್ಯಾರ್ಥಿಗಳಿಗೆ ಕೌಶಲ್ಯ ಮಾದರಿ ಸಾಲ 7.5 ಲಕ್ಷ ರೂ.
- ಮೊದಲ ಬಾರಿಗೆ ಉದ್ಯೋಗಿಗಳಿಗೆ ಹೆಚ್ಚುವರಿ ಪಿಎಫ್
- ಉದ್ಯೋಗಗಳಲ್ಲಿ ಮಹಿಳೆಯರಿಗೆ ಆದ್ಯತೆ
- ಬೋಧಗಯಾ-ವೈಶಾಲಿ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗುವುದು.
- ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ ನಿರ್ಮಾಣ.
- ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ದ್ವಿಪಥ ಸೇತುವೆ.