Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಜಗತ್ತಿನ ಮೊದಲ ಸಿಎನ್‌ಜಿ ಬೈಕ್ ಬಜಾಜ್ ಫ್ರೀಡಂ 125 ಬಿಡುಗಡೆ: ದೇಶದಲ್ಲೂ ಬುಕಿಂಗ್ ಆರಂಭ
ದೇಶಪ್ರಮುಖ

ಜಗತ್ತಿನ ಮೊದಲ ಸಿಎನ್‌ಜಿ ಬೈಕ್ ಬಜಾಜ್ ಫ್ರೀಡಂ 125 ಬಿಡುಗಡೆ: ದೇಶದಲ್ಲೂ ಬುಕಿಂಗ್ ಆರಂಭ

Share
2 Min Read
SHARE

newsics.com

ನವದೆಹಲಿ: ಬಜಾಜ್ ಕಂಪನಿ ಇದೀಗ ವಿಶ್ವದ ಮೊದಲ ಸಿಎನ್ಜಿ ಬೈಕ್ ಅನ್ನು ಲಾಂಚ್ ಮಾಡಿದೆ.

ಈ ಸಿಎನ್ಜಿ ಬೈಕ್ಗೆ ಬಜಾಜ್ ಫ್ರೀಡಂ 125 ಎಂಬ ಹೆಸರಿಡಲಾಗಿದೆ. ಪೆಟ್ರೋಲ್ ದರ ಹೆಚ್ಚಾಗುತ್ತಿದ್ದಂತೆ ಬಜಾಜ್ ಇದೀಗ ಸಿಎನ್ಜಿ ಬೈಕ್ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ.

ಅದ್ಧೂರಿಯಾಗಿ ಆಯೋಜಿಸಿದ್ದ ಬೈಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಮೇಲ್ಮೈ ಸಾರಿಗೆ ಸಚಿವ ನಿತಿನ್ ಗಡ್ಕರಿ ಪಾಲ್ಗೊಂಡಿದ್ದರು.

ಸಿಎನ್‌ಜಿ – ಪೆಟ್ರೋಲ್:

ಈ ಹೊಸ ಬಜಾಜ್ ಬೈಕ್ನಲ್ಲಿ ಸಿಎನ್‌ಜಿ ಹಾಗೂ ಪೆಟ್ರೋಲ್‌ ಎರಡೂ ಟ್ಯಾಂಕ್‌ ಅಳವಡಿಸಲಾಗಿದೆ. ಈ ಮೂಲಕ ಸಿಎನ್ಜಿ ಖಾಲಿಯಾದ ತಕ್ಷಣ ಪೆಟ್ರೋಲ್ ಬಳಸಿಕೊಂಡು ಬೈಕ್ ಓಡಿಸಬಹುದು.

ಈ ಫ್ರೀಡಂ 125 ಬೈಕ್ ಮೂರು ವೇರಿಯಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್ ಫ್ರೀಡಂ ಡಿಸ್ಕ್ ಎಲ್ಇಡಿ, ಫ್ರೀಡಂ ಡ್ರಮ್ ಎಲ್ಇಡಿ ಮತ್ತು ಫ್ರೀಡಂ ಡ್ರಮ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ ಎಂದು ಬಜಾಜ್ ಆಟೋ ಹೇಳಿದೆ.

ಡ್ಯುಯಲ್ ಟೋನ್ ಬಣ್ಣದೊಂದಿಗೆ ಏಳು ಬಣ್ಣಗಳಲ್ಲಿ ಈ ಬೈಕ್ ಲಭ್ಯವಾಗಲಿದೆ. ಇದರಲ್ಲಿ ಕಂಪನಿಯು ಡಿಸ್ಕ್ ಎಲ್ಇಡಿ ರೂಪಾಂತರದ ಬೆಲೆಯನ್ನು ರೂ.1.10 ಲಕ್ಷ ಎಂದು ನಮೂದಿಸಿದೆ. ಡ್ರಮ್ ಎಲ್‌ಇಡಿಗೆ 1.05 ಲಕ್ಷ ಮತ್ತು ಡ್ರಮ್ ರೂಪಾಂತರಕ್ಕೆ ರೂ.95,000 ಎಂದು ಕಂಪನಿ ತಿಳಿಸಿದೆ.
125 ಸಿಸಿ ಎಂಜಿನ್:

125 ಸಿಸಿ ಎಂಜಿನ್ ಹೊಂದಿರುವ ಫ್ರೀಡಂ 125, 2 ಕೆಜಿ ಸಿಎನ್‌ಜಿ ಟ್ಯಾಂಕ್ ಮತ್ತು 2 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಸಿಎನ್‌ಜಿ 2 ಕೆಜಿಗೆ 200 ಕಿಮೀ ಮತ್ತು ಪೆಟ್ರೋಲ್ 2 ಲೀಟರ್‌ಗೆ 130 ಕಿಮೀ (ಲೀಟರ್‌ಗೆ 65 ಕಿಮೀ) ಮೈಲೇಜ್ ನೀಡುತ್ತದೆ ಎಂದು ಕಂಪನಿ ಬಹಿರಂಗಪಡಿಸಿದೆ.

ಈ ಎಂಜಿನ್ 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್‌ಜಿಯಲ್ಲಿ ಗರಿಷ್ಠ ವೇಗ ಗಂಟೆಗೆ 90.5 ಕಿಮೀ ಮತ್ತು ಪೆಟ್ರೋಲ್‌ನಲ್ಲಿ ಗರಿಷ್ಠ ವೇಗ ಗಂಟೆಗೆ 93.4 ಕಿಮೀ ಎಂದು ಕಂಪನಿ ಹೇಳಿಕೊಂಡಿದೆ.

ಸೀಟ್ ಕೆಳಗೆ ಟ್ಯಾಂಕ್:

ಸೀಟಿನ ಕೆಳಗೆ ಸಿಎನ್‌ಜಿ ಮತ್ತು ಪೆಟ್ರೋಲ್ ಟ್ಯಾಂಕ್‌ಗಳನ್ನು ಜೋಡಿಸಲಾಗಿದೆ.
ಅಪಘಾತಗಳಾದಾಗ ಸಿಎನ್‌ಜಿ ಸೋರಿಕೆಯನ್ನು ತಡೆಗಟ್ಟಲು ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಸಾಮಾನ್ಯ ಪೆಟ್ರೋಲ್ ಬೈಕ್‌ಗೆ ಹೋಲಿಸಿದರೆ ಈ ಬೈಕ್ 50 ಪ್ರತಿಶತದಷ್ಟು ವೆಚ್ಚ ಕಡಿಮೆ. ಈ ಮೂಲಕ ಕೇವಲ ಐದು ವರ್ಷಗಳಲ್ಲಿ ರೂ.75,000 ವರೆಗೆ ಉಳಿಸಬಹುದು ಎಂದು ಬಜಾಜ್ ಆಟೋ ಹೇಳಿಕೊಂಡಿದೆ.

ಬದಲಾವಣೆ ಸುಲಭ:
ಸಿಎನ್‌ಜಿ ಮತ್ತು ಪೆಟ್ರೋಲ್ ಮೋಡ್ ಅನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು ಎಂದು ಕಂಪನಿ ಹೇಳಿದೆ. ಬೈಕ್ ನಿಲ್ಲಿಸದೆ ಇಂಧನ ಆಯ್ಕೆಯನ್ನು ಬದಲಾಯಿಸಬಹುದು. ಇದಕ್ಕಾಗಿ ಹ್ಯಾಂಡಲ್ನಲ್ಲೇ ಸ್ವಿಚ್ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬಜಾಜ್ ಫ್ರೀಡಂ 125 ಬೈಕ್ ಬ್ಲೂಟೂತ್ ಕನೆಕ್ಟಿವಿಟಿ, ಮೊನೊ ಶಾಕ್ ಸಸ್ಪೆನ್ಷನ್ ಮತ್ತು ಎತ್ತರದ ಸೀಟ್‌ನೊಂದಿಗೆ ಬರುತ್ತದೆ. ಎಲ್ಇಡಿ ರೌಂಡ್ ಹೆಡ್ಲೈಟ್ ಅಳವಡಿಸಲಾಗಿದೆ.

ಬುಕಿಂಗ್ ಆರಂಭ:

ಈಗಾಗಲೇ ಕಂಪನಿ ವೆಬ್‌ಸೈಟ್‌ನಲ್ಲಿ ಬೈಕ್ ಬುಕ್ಕಿಂಗ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಖರೀದಿಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ವಿಸ್ತರಿಸಲಾಗುವುದು ಎಂದು ಕಂಪನಿ ಹೇಳಿದೆ.

ಮುಡಾ ಹಗರಣ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ, 20 ಐಎಎಸ್ ಅಧಿಕಾರಿಗಳ ಟ್ರಾನ್ಸ್‌ಫರ್

6 ದಿನ ವ್ಯಾಟ್ಸಾಪ್, ಫೇಸ್‌ಬುಕ್ ಸೇರಿ ಎಲ್ಲ ಸೋಶಿಯಲ್ ಮೀಡಿಯಾ ಬ್ಯಾನ್!

‘ಕಲ್ಕಿ 2898 ಎಡಿ’ ಸಿನಿಮಾ ನೋಡಲು ಹೈದರಾಬಾದ್‌ಗೆ ಬಂದ ಜಪಾನ್‌ನ ಪ್ರಭಾಸ್ ಫ್ಯಾನ್ಸ್!

TAGGED:World's First CNG Bike Bajaj Freedom 125 Launched: Bookings Begin in Country
Share This Article
Facebook Twitter Copy Link Print
Previous Article ರಾಜ್ಯದಲ್ಲಿ ವ್ಯಾಪಕ ಮಳೆ: ನೂರು ಅಡಿ ತಲುಪಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
Next Article Namma Metro ನೇರಳೆ ಮಾರ್ಗದಲ್ಲಿ ಮಹತ್ವದ ಬದಲಾವಣೆ: ನಾಳೆಯಿಂದಲೇ ಜಾರಿ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?