ಕೊನೆಗೂ NEET- PG ದಿನಾಂಕ ನಿಗದಿ

newsics.com ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ ವಿವಾದದ ಕಾರಣ ಮುಂದೂಡಲ್ಪಟ್ಟಿದ್ದ ನೀಟ್‌-ಪಿಜಿ (NEET PG) ಪರೀಕ್ಷೆಗೆ ಕೊನೆಗೂ ದಿನಾಂಕ ನಿಗದಿಪಡಿಸಲಾಗಿದೆ. ಮುಂದಿನ ತಿಂಗಳು ಆಗಸ್ಟ್‌ 11 ರಂದು ಪರೀಕ್ಷೆ ನಡೆಯಲಿದೆ. ಎರಡು ಹಂತದಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ಮೊದಲಿನ ಘೋಷಣೆ ಪ್ರಕಾರ ಜೂ.23 ರಂದು ಪರೀಕ್ಷೆ ನಡೆಯಬೇಕಿತ್ತು. ಅಕ್ರಮದ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ನ್ಯಾಷನಲ್‌ ಬೋರ್ಡ್‌ ಆಫ್‌ ಎಕ್ಸಾಮಿನೇಷನ್ಸ್‌ (NBE) ಶುಕ್ರವಾರ ಹೊಸ ದಿನಾಂಕವನ್ನು ಪ್ರಕಟಿಸಿದೆ. NBE ಕಳೆದ ಏಳು ವರ್ಷಗಳಿಂದ NEET-PG … Continue reading ಕೊನೆಗೂ NEET- PG ದಿನಾಂಕ ನಿಗದಿ