newsics.com
ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ ವಿವಾದದ ಕಾರಣ ಮುಂದೂಡಲ್ಪಟ್ಟಿದ್ದ ನೀಟ್-ಪಿಜಿ (NEET PG) ಪರೀಕ್ಷೆಗೆ ಕೊನೆಗೂ ದಿನಾಂಕ ನಿಗದಿಪಡಿಸಲಾಗಿದೆ.
ಮುಂದಿನ ತಿಂಗಳು ಆಗಸ್ಟ್ 11 ರಂದು ಪರೀಕ್ಷೆ ನಡೆಯಲಿದೆ. ಎರಡು ಹಂತದಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ಮೊದಲಿನ ಘೋಷಣೆ ಪ್ರಕಾರ ಜೂ.23 ರಂದು ಪರೀಕ್ಷೆ ನಡೆಯಬೇಕಿತ್ತು. ಅಕ್ರಮದ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ (NBE) ಶುಕ್ರವಾರ ಹೊಸ ದಿನಾಂಕವನ್ನು ಪ್ರಕಟಿಸಿದೆ. NBE ಕಳೆದ ಏಳು ವರ್ಷಗಳಿಂದ NEET-PG ಪರೀಕ್ಷೆ ನಡೆಸುತ್ತಿದೆ.
ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು, ಸರ್ಕಾರದ ಸೈಬರ್ ಅಪರಾಧ ವಿರೋಧಿ ಸಂಸ್ಥೆಯನ್ನು ಭೇಟಿ ಮಾಡಿದ ಕೆಲವು ದಿನಗಳ ನಂತರ ಹೊಸ ದಿನಾಂಕ ಘೋಷಣೆಯಾಗಿದೆ.
ನೀಟ್-ಪಿಜಿ ಪ್ರಕ್ರಿಯೆಯ ದೃಢತೆಯ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳುವುದಾಗಿ ಸರ್ಕಾರ ಹೇಳಿತ್ತು. ಪರೀಕ್ಷೆಗೆ ಎರಡು ಗಂಟೆಗಳ ಮೊದಲು ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕು ಎಂದು ಸಭೆ ನಡೆಸಿ ಸೂಚಿಸಲಾಗಿತ್ತು.
ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ಎಂಬಿಬಿಎಸ್ ಪದವಿ ಹೊಂದಿರುವವರ ಅರ್ಹತೆಯನ್ನು ನಿರ್ಣಯಿಸಲು NEET-PG ನಡೆಸಲಾಗುತ್ತದೆ.
ಮುಡಾ ಹಗರಣ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ, 20 ಐಎಎಸ್ ಅಧಿಕಾರಿಗಳ ಟ್ರಾನ್ಸ್‌ಫರ್
ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಸುಂದರಿ, ಹಾಟ್ ಬ್ಯೂಟಿ ಲುಕ್‌ಗೆ ಫ್ಯಾನ್ಸ್ ಫಿದಾ..