Newsics.com
ಲಕ್ನೋ: ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿದ್ದಕ್ಕೆ ಕರ್ನಾಟಕ ಪೊಲೀಸರು ಯೂಟ್ಯೂಬರ್‌ನನ್ನು ಬಂಧಿಸಲು ಉತ್ತರ ಪ್ರದೇಶದ ನೋಯ್ಡಾಕ್ಕೆ ತೆರಳಿದಾಗ ಭಾರೀ ಹೈಡ್ರಾಮಾ ನಡೆದಿದೆ.
ಪತ್ರಕರ್ತ ಅಜಿತ್ ಭಾರ್ತಿ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಇಂದು ನೋಟಿಸ್ ನೀಡಲು ಮೂವರು ಕರ್ನಾಟಕ ಪೊಲೀಸರು ನೋಯ್ಡಾ ನಿವಾಸಕ್ಕೆ ಆಗಮಿಸಿದ್ದರು. ಅಜಿತ್ ಭಾರ್ತಿ ಮನೆ ಮುಂದೆ ಕಾದ ಕರ್ನಾಟಕದ ಪೊಲೀಸರು ನೋಯ್ಡಾ ಪೊಲೀಸರ ಮಧ್ಯಪ್ರವೇಶದ ಬಳಿಕ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ.
https://x.com/ARanganathan72/status/1803744986317635712?ref_src=twsrc%5Etfw%7Ctwcamp%5Etweetembed%7Ctwterm%5E1803744986317635712%7Ctwgr%5Efd44ea4519ca41a40ed6a8ebc3f393e544372039%7Ctwcon%5Es1_&ref_url=https%3A%2F%2Fpublictv.in%2Fface-off-between-karnataka-up-cops-outside-ajeet-bhartis-noida-residence%2F
ಅಜಿತ್ ಭಾರ್ತಿ ನಿವಾಸಕ್ಕೆ ತೆರಳಿದ್ದ ಪೊಲೀಸರು ನೋಟಿಸ್ ನೀಡಲು ಆಗಮಿಸಿದ್ದೇವೆ ಎಂದು ಹೇಳಿದ್ದಾರೆ. ಪೊಲೀಸರನ್ನು ಮನೆಯೊಳಗೆ ಸೇರಿಸದ ಅಜಿತ್ ಭಾರ್ತಿ ಸ್ಥಳಿಯ ಠಾಣೆಗೆ ಮಾಹಿತಿ ನೀಡಿ ಅಕ್ರಮವಾಗಿ ಬಂಧಿಸಲು ಕರ್ನಾಟಕ ಪೊಲೀಸ್ ಆಗಮಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರನ್ನು ಟ್ಯಾಗ್ ಮಾಡಿದ್ದಾರೆ.
ಸ್ಥಳಕ್ಕೆ ಬಂದ ನೋಯ್ಡಾ ಪೊಲೀಸರು ಕರ್ನಾಟಕ ಪೊಲೀಸರನ್ನು ವಿಚಾರಣೆ ನಡೆಸಿದ್ದಾರೆ. ನಮಗೆ ಮಾಹಿತಿ ನೀಡದೇ ಬಂಧಿಸಲು ಆಗಮಿಸಿದ್ದಕ್ಕೆ ಅಜಿತ್ ಭಾರ್ತಿ ಬಂಧನಕ್ಕೆ ಅನುಮತಿ ನೀಡದೇ ವಾಪಸ್ ಕಳುಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಜಿತ್ ಭಾರ್ತಿ, ಗ್ಯಾರಂಟಿ ಯೋಜನೆ ನೀಡಲು ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ. ಆದರೆ ನನ್ನನ್ನು ಬಂಧಿಸಲು ನೊಯ್ಡಾವರೆಗೂ ಬಂದಿದ್ದಾರೆ. ಇದೊಂದು ಸಣ್ಣ ಪ್ರಕರಣ ಆದರೆ ಬೆದರಿಸುವ ಮೂಲಕ ಮಾಧ್ಯಮವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಧ್ಯಪ್ರವೇಶದ ಮಾಡಿದ ನೊಯ್ಡಾ ಪೊಲೀಸ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.ಕರ್ನಾಟಕ ಪೊಲೀಸರು ಅಜಿತ್ ಭಾರ್ತಿಗೆ ನೋಟಿಸ್ ನೀಡಿ 7 ದಿನದ ಒಳಗಡೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತೆರಳಿದರು. ಈಗ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಪೊಲೀಸರ ನಡೆಯನ್ನು ಹಲವು ಮಂದಿ ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.