newsics.com/ನ್ಯೂಸಿಕ್ಸ್
ಬೆಂಗಳೂರು: ಮದುವೆಯಾದ ಮೂರೇ ವರ್ಷಕ್ಕೆ 23ರ ವಂದನಾ ನೇಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ. ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪ ಮಾಡ್ತಿದ್ದಾರೆ.
https://youtube.com/shorts/xzgXqaAsbcA?si=TkhVxPE1WLxdWyg8
ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ ಗೃಹಿಣಿ ವಂದನಾ, ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂರು ವರ್ಷಗಳ ಹಿಂದೆ ವಿಕ್ರಂ ಶೇಷ ಎಂಬಾತನ ಜೊತೆ ವಂದನಾ ವಿವಾಹವಾಗಿತ್ತು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಕುಟುಂಬಸ್ಥರು ಬಳಿಕ ವರದಕ್ಷಿಣೆ ಹಣಕ್ಕೆ ಕಿರುಕುಳ ಕೊಡ್ತಿದ್ರು ಎನ್ನಲಾಗ್ತಿದೆ. ಕೆಲವು ಬಾರಿ ಹಣದ ವಿಚಾರಕ್ಕೆ ಗಲಾಟೆ ನಡೆದಿತ್ತಂತೆ. ಇದ್ರಿಂದ ವಂದನಾ ಮಾನಸಿಕವಾಗಿ ನೊಂದಿದ್ದಳು ಎಂದು ಪೋಷಕರು ಹೇಳ್ತಿದ್ದಾರೆ.
ಅತ್ತೆಗೆ ತಾನೇ ಕರೆ ಮಾಡಿದ ವಿಕ್ರಂ ನಿಮ್ಮ ಮಗಳು ನೇಣು ಹಾಕಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ವಂದನಾ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ, ವಂದನಾ ಅತ್ತೆ ಅಮೃತ, ಮಾವ ಶ್ರೀನಿವಾಸ್, ಮೈದುನ ವಿನಿಷ್ ಹಾಗೂ ಗಂಡ ವಿಕ್ರಂ ಶೇಷನ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.