Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪೂಜಾ ದತ್ತಾ ಬೆತ್ತಲೆ ಶವ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಕರ್ನಾಟಕಪ್ರಮುಖ

ಪೂಜಾ ದತ್ತಾ ಬೆತ್ತಲೆ ಶವ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

Share
2 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರಿನ ಆಡುಗೋಡಿಯಲ್ಲಿ ಜಾರ್ಖಂಡ್ ಮೂಲದ ಟೆಕ್ಕಿ ಪೂಜಾ ದತ್ತಾ ನಿಗೂಢ ಸಾವಿನ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಟೆಕ್ಕಿ ಪೂಜಾ ವರ್ಷಗಳ ಹಿಂದೆಯೇ ಕೆಲಸ ಬಿಟ್ಟಿದ್ರಂತೆ. ಹಾಗಾದ್ರೆ ಈಕೆ ಬಾಡಿಗೆ ಹೇಗೆ ಯಾರು ಕಟ್ತಿದ್ರು? ಒಂಟಿಯಾಗಿದ್ದ ಈಕೆ ಜೀವನ ಹೇಗೆ ಸಾಗ್ತಿತ್ತು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ? ಈಕೆಯ ಮನೆಗೆ ಬಂದು ಹೋಗ್ತಿದ್ದವ ಯಾರು ಎನ್ನುವ ಬಗ್ಗೆ ಖಾಕಿ ನಡೆಸ್ತಿರುವಾಗಲೇ ಪೂಜಾಳದು ಕೊಲೆಯಲ್ಲ  ಆತ್ಮಹತ್ಯೆ ಅನ್ನೋ ಅನುಮಾನ ಕೂಡ ದಟ್ಟವಾಗ್ತಿದೆ. ಸದ್ಯ, ಘಟನೆಯ ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ಹಲವು ಆಘಾತಕಾರಿ ಮಾಹಿತಿ ಲಭ್ಯವಾಗಿವೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪೂಜಾ ದತ್ತಾ, ಸುಮಾರು ಒಂದು ವರ್ಷದ ಹಿಂದೆಯೇ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಅವರು ಮೊಬೈಲ್ ಆಫ್ ಮಾಡಿಕೊಂಡಿದ್ದು, ಹಳೆಯ ಸಿಮ್ ಕಾರ್ಡ್ ಬದಲಿಸಿ ಹೊಸ ಸಿಮ್ ಬಳಸುತ್ತಿದ್ದರು.

ಪೂಜಾ ರೂಮ್​ ತುಂಬೆಲ್ಲಾ ಚೀಟಿಗಳಿದ್ದು, ಕೆಲ ಬರಹ ಬರೆದು ಅರಿದು ಆಕೆಯೇ ಹರಿದು ಹಾಕಿದ್ದಳು ಎನ್ನಲಾಗ್ತಿದೆ. PEASE, EGO, TRUST, SATISFACTION, LOVE, SOLO LOVE, ಹೀಗೆಲ್ಲಾ ಬರೆದು ಗೋಡೆಗಳ ಮೇಲೂ ಪೂಜಾ ಅಂಟಿಸಿದ್ದಳಂತೆ. ಮೂರು ತಿಂಗಳಿಂದ ಯಾರ ಸಂಪರ್ಕದಲ್ಲೂ ಇಲ್ಲದ ಈಕೆ ಮನೆಯಲ್ಲಿ ಹೇಗಿದ್ದಳು ಅನ್ನೋದೇ ಅಚ್ಚರಿಯಾಗಿದೆ.

ಪೂಜಾ ದತ್ತಾ ಕಳೆದ ಒಂದು ವರ್ಷದಿಂದ ಕುಟುಂಬದವರು ಅಥವಾ ಸ್ನೇಹಿತರೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಮೂರು ತಿಂಗಳ ಹಿಂದೆ ಅವರ ಹೊಸ ಸಿಮ್‌ನ ವ್ಯಾಲಿಡಿಟಿ ಕೂಡ ಮುಗಿದಿದ್ದು, ಫೋನ್ ಸಂಪೂರ್ಣ ಸ್ಥಗಿತಗೊಂಡಿತ್ತು. ಅಕ್ಕಪಕ್ಕದ ನಿವಾಸಿಗಳೂ ಕೂಡ ಪೂಜಾ ಅವರನ್ನು ಕಳೆದ ಮೂರು ತಿಂಗಳಿನಿಂದ ನೋಡಿರಲಿಲ್ಲ ಎಂಬ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ.

 

ಇಂದು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ತಡರಾತ್ರಿ ಜಾರ್ಖಂಡ್​​ನಿಂದ ಪೂಜಾ ಪೋಷಕರು ಆಗಮಿಸಿದ್ದಾರೆ. ಈಕೆ ಡಿಪ್ರೇಶನ್​​​ನಿಂದ ಆತ್ಮಹತ್ಯೆ ಮಾಡಿಕೊಂಡಿರೋ ಅನುಮಾನವಿದೆ. ಆದ್ರೂ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿರೋ ಪೊಲೀಸರು, ಮನೆ ಮಾಲೀಕರಿಗೆ ನೋಟಿಸ್​​ ನೀಡಿದ್ದಾರೆ.

ಟೆಕ್ಕಿ ಪೂಜಾ ದತ್ತ ಎಷ್ಟು ವರ್ಷಗಳಿಂದ ಈ ಮನೆಯಲ್ಲೇ ಇದ್ದರು, ಮನೆಗೆ ಯಾರಾದ್ರೂ ಬರ್ತಾ ಇದ್ರಾ? ಕೊನೆಯ ಬಾಡಿಗೆ ಯಾವತ್ತು ಕಟ್ಟಿದ್ದಾರೆ. ಆನ್ ಲೈನ್ ಅಥವಾ ಕ್ಯಾಶ್, ಯಾವ ರೀತಿ ಹಣ ಕೊಡ್ತಿದ್ರು ಎನ್ನುವ ಬಗ್ಗೆ ಕೂಡ ಮಾಲೀಕರನ್ನು ಪೊಲೀಸರು ತನಿಖೆಗೆ ಒಳಪಡಿಸಲಿದ್ದಾರೆ.

ಪೂಜಾ ಮೊಬೈಲ್ ನಂಬರ್ ನ ಒಂದು ವರ್ಷದ ಸಿಡಿಆರ್ ದಾಖಲೆಗಳನ್ನ ಪೊಲೀಸರು ಕೇಳಿದ್ದು, ಪೂಜಾ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ರು ಎಂದು ಪೊಲೀಸರು ತನಿಖೆ ನಡೆಸ್ತಿದ್ದಾರೆ. ವರ್ಷದ ಹಿಂದೆ ಕೆಲಸ ಬಿಟ್ಟಿದ್ದ ಪೂಜಾ ಬಳಿಕ ಕೆಲಸಕ್ಕೆ ಹೋಗ್ತಾ ಇರಲಿಲ್ಲ. ಹಾಗಾದ್ರೆ ಜೀವನಕ್ಕೆ ಹಣ ಎಲ್ಲಿಂದ ಬರ್ತಾ ಇತ್ತು. ಬಾಡಿಗೆ ಹೇಗೆ ಕಟ್ತಾ ಇದ್ದಳು ಅಂತಾನೂ ತನಿಖೆ ನಡೆದಿದೆ. ಪೂಜಾ ಅಕೌಂಟ್ ಡೀಟೆಲ್ಸ್ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ರು.

ಪೂಜಾ ಅಕೌಂಟ್ ಇರೋ ಬ್ಯಾಂಕ್​​ಗೂ ನೋಟಿಸ್​ ನೀಡಲಾಗಿದ್ದು, ಕಳೆದ ಒಂದು ವರ್ಷದ ಹಣದ ವಹಿವಾಟು ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕ್ತಿದ್ದಾರೆ. ಇದರ ಜೊತೆಗೆ ಪೂಜಾ ಈ ಹಿಂದೆ ಕೆಲಸ ಮಾಡ್ತಾ ಇದ್ದ ಕಂಪನಿಯಲ್ಲಿ ಆಕೆ ಕೆಲಸ ಬಿಡಲು ಕಾರಣ ಏನು ಅನ್ನೋ ಬಗ್ಗೆ ತನಿಖೆ ನಡೆಯುತ್ತಿದ್ದು, ಶೀಘ್ರವೇ ಪೂಜಾ ಸಾವಿನ ರಹಸ್ಯ ಹೊರಬರಲಿದೆ.

https://www.newsics.com/2026/04/29/kidnappers-tie-up-small-childrens-hands-and-feet-at-day-care-center/

 

TAGGED:New twist in Pooja Dutta's nude body case
Share This Article
Facebook Twitter Copy Link Print
Previous Article ಡೇ-ಕೇರ್ ಸೆಂಟರ್‌ ನಲ್ಲಿ ಪುಟ್ಟ ಮಕ್ಕಳ ಕೈಕಾಲು ಕಟ್ಟಿ ಹಾಕಿದ ಕಿರಾತಕರು : ವೈರಲ್ ವಿಡಿಯೋ ನೋಡಿ
Next Article India-Pakistan ಒಂದು ಸಹಿಗಾಗಿ ಭಾರತದ ಮುಂದೆ ಮತ್ತೆ ಕೈ ಚಾಚಿದ ಪಾಕಿಸ್ತಾನ

Popular Posts

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

You Might Also Like

ಪ್ರಮುಖದೇಶ

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read
ಪ್ರಮುಖCrimeದೇಶ

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read
ಪ್ರಮುಖಕರ್ನಾಟಕಮನರಂಜನೆ

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read
ಕರ್ನಾಟಕಪ್ರಮುಖ

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?