newsics.com/ನ್ಯೂಸಿಕ್ಸ್
ಮುಂಬೈ: ಊಟದ ನಂತರ ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಮುಂಬೈನ ಪೈಧುನಿ ಪ್ರದೇಶದಲ್ಲಿ ನಡೆದಿದೆ.
https://youtube.com/shorts/eOoYZp9a9F0?si=CP6V90gKWCTFTFCS
40 ವರ್ಷದ ಅಬ್ದುಲ್ಲಾ ದೋಕಾಡಿಯಾ, ಅವರ ಪತ್ನಿ ನಸ್ರೀನ್ ದೋಕಾಡಿಯಾ (35), ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಆಯೇಷಾ (16) ಮತ್ತು ಜೈನಾಬ್ (13) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಶನಿವಾರ ರಾತ್ರಿ ವೀಕೆಂಡ್ ನೆಪದಲ್ಲಿ ಅವರು ತಮ್ಮ ಸ್ನೇಹಿತರಿಗೆ ಮನೆಯಲ್ಲೇ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು. ಅದಕ್ಕಾಗಿ ಬಿರಿಯಾನಿ ಮಾಡಿಸಿದ್ದರು. ರಾತ್ರಿ ಬಂದ ಅತಿಥಿಗಳು ಊಟ ಮಾಡಿ ಮನೆಗೆ ತೆರಳಿದ್ದರು.
ಊಟ ಜಾಸ್ತಿಯಾಗಿದ್ದರಿಂದ ಅಪ್ಪ-ಅಮ್ಮ-ಮಕ್ಕಳು ರಾತ್ರಿ ಕಲ್ಲಂಗಡಿ ಹಣ್ಣು ಕಟ್ ಮಾಡಿ ತಿಂದು ಮಲಗಿದ್ದರು. ಆದರೆ, ಅದಾದ ಸ್ವಲ್ಪ ಹೊತ್ತಿನಲ್ಲೇ ನಾಲ್ವರಿಗೂ ವಾಂತಿ, ಭೇದಿ ಶುರುವಾಗಿತ್ತು. ಬೆಳಗಿನ ಜಾವವಾಗುವಷ್ಟರಲ್ಲಿ ಎದ್ದು ನಿಲ್ಲಲೂ ಆಗದಂತಹ ಸುಸ್ತು ಅವರನ್ನು ಆವರಿಸಿತ್ತು.
ಹೀಗಾಗಿ, ತಮ್ಮ ಸ್ನೇಹಿತರಿಗೆ ಫೋನ್ ಮಾಡಿದ ಅವರು ಅವರ ಜೊತೆ ಆಸ್ಪತ್ರೆಗೆ ತೆರಳಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರೆಲ್ಲರೂ ಮೃತಪಟ್ಟಿದ್ದಾರೆ. ಫುಡ್ ಪಾಯಿಸನಿಂಗ್ನಿಂದ ಇಡೀ ಕುಟುಂಬ ಸಾವನ್ನಪ್ಪಿದೆ ಎನ್ನಲಾಗುತ್ತಿದೆ.
ಅವರು ತಿಂದ ಬಿರಿಯಾನಿಯನ್ನೇ ತಿಂದಿರುವ ಗೆಳೆಯರು ಆರೋಗ್ಯವಾಗಿದ್ದಾರೆ. ಹಾಗಾದರೆ, ಕಲ್ಲಂಗಡಿ ಹಣ್ಣಿನಿಂದ ವಿಷ ಅವರ ದೇಹ ಸೇರಿತಾ ಎಂಬ ಅನುಮಾನಗಳು ಮೂಡಿವೆ. ಇವೆಲ್ಲದಕ್ಕೂ ಮರಣೋತ್ತರ ಪರೀಕ್ಷೆಯಲ್ಲಿ ಉತ್ತರ ಸಿಗುವ ನಿರೀಕ್ಷೆಯಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.