Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮದುವೆಗೆ ಆಹ್ವಾನಿಸಿದ ರಾಯಚೂರಿನ ಯುವಕನಿಗೆ ಪ್ರಧಾನಿ ಮೋದಿ ಶುಭಾಶಯ
ದೇಶಕರ್ನಾಟಕಪ್ರಮುಖ

ಮದುವೆಗೆ ಆಹ್ವಾನಿಸಿದ ರಾಯಚೂರಿನ ಯುವಕನಿಗೆ ಪ್ರಧಾನಿ ಮೋದಿ ಶುಭಾಶಯ

Share
1 Min Read
SHARE

newsics.com/ನ್ಯೂಸಿಕ್ಸ್

ರಾಯಚೂರು: ಸಾಮಾನ್ಯ ಯುವಕನೊಬ್ಬ ಪ್ರೀತಿಯಿಂದ ಕಳುಹಿಸಿದ ಮದುವೆ ಆಹ್ವಾನ ಪತ್ರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ವಿಶೇಷವಾಗಿ ಸ್ಪಂದಿಸಿದ್ದು, ಈ ಘಟನೆ ರಾಯಚೂರಿನಲ್ಲಿ ನಡೆದಿದೆ. ನವ ಜೋಡಿಗೆ ಶುಭಾಶಯ ಕಳುಹಿಸುವ ಮೂಲಕ ಮೋದಿ ಅವರು ಸಿಂಧನೂರು ತಾಲೂಕಿನ ಕಾನಿಹಳ ಗ್ರಾಮದ ದಂಪತಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.

https://youtube.com/shorts/eOoYZp9a9F0?si=CP6V90gKWCTFTFCS

ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ನಿವಾಸಿ ರಾಜೇಶ್ ನಾಯಕ್ ಎಂಬ ಯುವಕನ ಮದುವೆ ಇದೇ ಏಪ್ರಿಲ್ 13 ರಂದು ಸವಿತಾ ಎಂಬುವವರ ಜೊತೆ ನಿಶ್ಚಯವಾಗಿತ್ತು. ಈ ಸಂಭ್ರಮಕ್ಕೆ ಪ್ರಧಾನಿ ಮೋದಿಯವರನ್ನೂ ಆಹ್ವಾನಿಸಬೇಕೆಂದು ಬಯಸಿದ ರಾಜೇಶ್, ದೆಹಲಿಯ ಪ್ರಧಾನಿ ಕಚೇರಿಗೆ ಮದುವೆಯ ಆಹ್ವಾನ ಪತ್ರಿಕೆಯನ್ನು ರವಾನಿಸಿದ್ದರು. ಸಾಮಾನ್ಯ ಪ್ರಜೆಯ ಈ ಆಹ್ವಾನವನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ಪತ್ರದ ಮೂಲಕ ನವಜೋಡಿಗೆ ಶುಭ ಹಾರೈಸಿದ್ದಾರೆ.

ಆಮಂತ್ರಣಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ಅವರು, ‘ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರಿಗೆ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು. ನಿಮ್ಮಿಬ್ಬರ ಹೃದಯ, ಮನಸ್ಸು ಮತ್ತು ಕ್ರಿಯೆಗಳು ಒಂದಾಗಿರಲಿ. ಜೀವನದ ಏರಿಳಿತಗಳಲ್ಲಿ ಪರಸ್ಪರ ಕೈಹಿಡಿದು, ಕನಸುಗಳನ್ನು ಸಾಕಾರಗೊಳಿಸುತ್ತಾ, ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸಿ. ಪರಸ್ಪರರ ದೋಷಗಳನ್ನು ಒಪ್ಪಿಕೊಂಡು, ಗುಣಗಳನ್ನು ಗೌರವಿಸುತ್ತಾ ಆದರ್ಶ ದಂಪತಿಗಳಾಗಿ ಬಾಳಿ. ನಿಮ್ಮ ದಾಂಪತ್ಯ ಜೀವನ ಸುದೀರ್ಘ, ಸುಖಮಯ ಮತ್ತು ಸುಂದರವಾಗಿರಲಿ’ ಎಂದು ಹಾರೈಸಿದ್ದಾರೆ.

ದೇಶದ ಪ್ರಧಾನಿಯವರು ಒಬ್ಬ ಸಾಮಾನ್ಯ ಪ್ರಜೆಯ ಆಮಂತ್ರಣ ಪತ್ರವನ್ನು ಓದಿ, ಅದಕ್ಕೆ ವೈಯಕ್ತಿಕವಾಗಿ ಶುಭಾಶಯ ಪತ್ರ ಕಳುಹಿಸಿರುವುದು ತಮಗೆ ಅತ್ಯಂತ ಹೆಮ್ಮೆಯ ಮತ್ತು ಅಚ್ಚರಿಯ ವಿಷಯ ಎಂದು ರಾಜೇಶ್ ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಧಾನಿಯವರ ಈ ನಡೆಯನ್ನು ಅನೇಕರು ಶ್ಲಾಘಿಸಿದ್ದಾರೆ.

https://www.newsics.com/2026/04/27/95-indian-cities-3-districts-of-karnataka-among-100-hottest-cities-in-the-world/

TAGGED:PM Modi congratulates Raichur youth who invited him to his wedding
Share This Article
Facebook Twitter Copy Link Print
Previous Article Global Temperature ಹೀಟ್​ ವೇವ್​ ಅಬ್ಬರ : ಜಗತ್ತಿನ ಅತಿ ಹೆಚ್ಚು ತಾಪಮಾನವಿರುವ 100 ನಗರಗಳಲ್ಲಿ ಭಾರತದ 95 ನಗರ, ಕರ್ನಾಟಕದ 3 ಜಿಲ್ಲೆಗಳು
Next Article ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಫೋನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ : ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?