newsics.com/ನ್ಯೂಸಿಕ್ಸ್
ನವದೆಹಲಿ:ಆಮ್ ಆದ್ಮಿ ಪಾರ್ಟಿಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಈಗಾಗಲೇ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಧ್ವನಿ ಅಡಗಿಸಿದ ಆಮ್ ಆದ್ಮಿ ಪಾರ್ಟಿಗೆ ಇದೀಗ ಸಂಕಷ್ಟ ಹೆಚ್ಚಾಗಿದೆ. ರಾಘವ್ ಚಡ್ಡಾ ಸೇರಿದಂತೆ ಏಳು ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
https://youtube.com/shorts/yrC3ODyMmjo?si=ybubL3Ee_pXg1sLS
ಈ ಪೈಕಿ ಮೂವರು ಈಗಾಗಲೇ ಬಿಜೆಪಿ ಸೇರಿಕೊಂಡಿದ್ದಾರೆ. ಇನ್ನುಳಿದ ಸಂಸದರು ಶೀಘ್ರದಲ್ಲೇ ಅಧಿಕೃತವಾಗಿ ಬಿಜೆಪಿ ಸೇರಿಕೊಳ್ಳಲಿದ್ದಾರೆ. ರಾಜ್ಯಸಭೆಯಲ್ಲ 10 ಸಂಸದರನ್ನು ಹೊಂದಿದ ಆಮ್ ಆದ್ಮಿ ಪಾರ್ಟಿಯಲ್ಲಿ ಈಗ ಉಳಿದಿರೋದು ಕೇವಲ ಮೂವರು ಮಾತ್ರ.
ಇದೀಗ ಆರವಿಂದ್ ಕೇಜ್ರಿವಾಲ್ ಬಲೈಗೆ, ಎಡಗೈಗಳಾಗಿ ಗುರುತಿಸಿಕೊಂಡಿದ್ದ ಕೇವಲ ಮೂವರು ಸಂಸದರು ಮಾತ್ರ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ.
ರಾಘವ್ ಚಡ್ಡಾ ಸೇರಿ ಆಪ್ ರಾಜ್ಯಸಭಾ ಸಂಸದರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆ ಕುರಿತು ಆಪ್ ಪಕ್ಷ ಪ್ರತಿಕ್ರಿಯಿಸಿದೆ. ಇದು ಆಪರೇಷನ್ ಲೋಟಸ್ ಎಂದಿದೆ. ಈ ಕುರಿತು ಮಾತನಾಡಿದ ಸಂಜಯ್ ಸಿಂಗ್ ಪಕ್ಷ ತೊರೆದವರ ವಿರುದ್ಧ ಹರಿಹಾಯ್ದಿದ್ದಾರೆ. ಏನೂ ಅಲ್ಲದ ರಾಘವ್ ಚಡ್ಡಾ ಅವರಿಗೆ ಆಮ್ ಆದ್ಮಿ ಪಕ್ಷ ಎಲ್ಲಾ ನೀಡಿದೆ. ಶಾಸಕನಾಗಿ ಮಾಡಿತು, ಬಳಿಕ ಸಂಸದನಾಗಿ ಮಾಡಿತು. ಆದರೆ ರಾಘವ್ ಚಡ್ಡ ಕೊನೆಗೆ ಬಿಜೆಪಿ ಮಡಿಲಲ್ಲಿ ಕುಳಿತುಕೊಂಡರು ಎಂದಿದ್ದಾರೆ.