newsics.com
ಸಿಗರೇಟ್ ಚಟಕ್ಕೆ ದಾಸರಾಗುವವರ ಸಂಖ್ಯೆ ಹೆಚ್ಚುತ್ತಲಿದೆ. ಯುವ ಪೀಳಿಗೆಯ ಆರೋಗ್ಯ ರಕ್ಷಣೆಗೆ ಕಠಿಣ ನಿರ್ಧಾರದ ಅಗತ್ಯವಿರುವ ಹಿನ್ನೆಲೆ 2009 ರ ನಂತರ ಜನಿಸಿದವರಿಗೆ ತಂಬಾಕು ಉತ್ಪನ್ನಗಳ ಮಾರಾಟವನ್ನ ನಿಷೇಧಿಸಲಾಗಿದೆ.
ಆರೋಗ್ಯಕ್ಕೆ ದೊಡ್ಡ ಸವಾಲಾಗಿರೋ ತಂಬಾಕು ಬಳಕೆಯನ್ನ ತಡೆಯಲು ಬ್ರಿಟನ್ ಸರ್ಕಾರ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಹೊಗೆ ಮುಕ್ತ ಪೀಳಿಗೆಯನ್ನ ಸೃಷ್ಟಿಸುವ ಗುರಿಯನ್ನು ಹೊಂದಿರುವ ‘ತಂಬಾಕು ಮತ್ತು ವೇಪ್ಸ್ ಮಸೂದೆ’ ಯನ್ನ ಬ್ರಿಟನ್ ಸಂಸತ್ತು ಅಂಗೀಕರಿಸಿದೆ. ಈ ಕಾನೂನಿನ ಪ್ರಕಾರ, 2009 ರ ನಂತರ ಜನಿಸಿದವರಿಗೆ ಜೀವನಪರ್ಯಂತ ತಂಬಾಕು ಉತ್ಪನ್ನಗಳ ಮಾರಾಟವನ್ನ ನಿಷೇಧಿಸಲಾಗುವುದು.
ಈ ಕಾನೂನಿನ ಪ್ರಮುಖ ಅಂಶವೆಂದ್ರೆ ತಂಬಾಕು ಉತ್ಪನ್ನಗಳ ಖರೀದಿಗೆ ವಿಧಿಸಲಾದ ವಯಸ್ಸಿನ ಮಿತಿ. ನಿಯಮಗಳ ಪ್ರಕಾರ, ಬ್ರಿಟನ್ ನಲ್ಲಿ ಸಿಗರೇಟ್ ಖರೀದಿಸಲು ಕನಿಷ್ಠ ವಯಸ್ಸು 18 ವರ್ಷಗಳು. ಆದ್ರೆ, ಹೊಸ ಕಾನೂನಿನ ಪ್ರಕಾರ, ಜನವರಿ 1, 2009 ನಂತರ ಜನಿಸಿದ ಯಾರಿಗೂ ತಂಬಾಕು ಉತ್ಪನ್ನಗಳನ್ನ ಮಾರಾಟ ಮಾಡುವಂತಿಲ್ಲ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇರುವ ವಾಹನಗಳಲ್ಲಿ ವೇಪಿಂಗ್ ಅನ್ನು ಸರ್ಕಾರ ನಿಷೇಧಿಸಿದೆ. ವೇಪಿಂಗ್ ಉತ್ಪನ್ನಗಳ ಪ್ಯಾಕೇಜಿಂಗ್, ಫ್ಲೇವರ್ ಗಳು ಮತ್ತು ಜಾಹೀರಾತಿನ ಮೇಲೆ ಈ ಸರ್ಕಾರವು ಈಗ ಸಂಪೂರ್ಣ ನಿಯಂತ್ರಣವನ್ನ ಹೊಂದಿದೆ.
ಬ್ರಿಟನ್ ತೆಗೆದುಕೊಂಡ ಈ ನಿರ್ಧಾರವು ವಿಶ್ವದಲ್ಲಿ ಚರ್ಚೆಯ ವಿಷಯವಾಗಿದೆ. ಭಾರತದಂತಹ ದೇಶಗಳಲ್ಲಿ, ತಂಬಾಕು ಬಳಕೆಯಿಂದ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಾರೆ. ನಮ್ಮ ದೇಶದಲ್ಲಿ, ‘COTPA’ ಕಾನೂನಿನ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಮಾರಾಟ ಮಾಡುವುದು ಅಪರಾಧ. ಆದ್ರೆ, ಬ್ರಿಟನ್ ನಂತೆ ವಯಸ್ಸಿನ ಮಿತಿಯನ್ನು ಕ್ರಮೇಣ ಹೆಚ್ಚಿಸುವುದ್ರಿಂದ ತಂಬಾಕು ಮುಕ್ತ ಸಮಾಜವನ್ನು ಸಾಧಿಸುವುದು ಸುಲಭವಾಗುತ್ತದೆ ಅನ್ನೋದು ತಜ್ಞರ ಅಭಿಪ್ರಾಯ.
https://www.newsics.com/2026/04/23/why-do-girls-get-their-periods-at-the-age-of-8/