Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಡೇಟಿಂಗ್ ಆ್ಯಪ್‌ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕ ಅರೆಸ್ಟ್
ಪ್ರಮುಖ

ಡೇಟಿಂಗ್ ಆ್ಯಪ್‌ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕ ಅರೆಸ್ಟ್

Share
2 Min Read
SHARE

ಡೇಟಿಂಗ್ ಆ್ಯಪ್‌ ಮೂಲಕ ಪ್ರೀತಿ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕನನ್ನು ಅರೆಸ್ಟ್  ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಆನಂದ್ ಕುಮಾರ್‌ಗೆ ಅರೆಸ್ಟ್ ಆದ ಆರೋಪಿ ಎಂದು ತಿಳಿದು ಬಂದಿದೆ. ಹೌದು, ಆನಂದ್ ಕುಮಾರ್ ಡೇಟಿಂಗ್ ಆ್ಯಪ್‌ಗಳಲ್ಲಿ ಈತ ಒಮ್ಮೆ ಡಾಕ್ಟರ್, ಇನ್ನೊಮ್ಮೆ ಲಾಯರ್, ಮತ್ತೊಮ್ಮೆ ಸಿನಿಮಾ ಪ್ರೊಡ್ಯೂಸರ್, ವೈಭವ್ ಅರೋರಾ, ರೋಹಿತ್ ಬೆಹ್ಲ್, ತರುಣ್ ಶರ್ಮಾ ಎಂಬ ನಕಲಿ ಹೆಸರುಗಳ ಅಡಿಯಲ್ಲಿ ಇನ್‌ಸ್ಟಾಗ್ರಾಮ್ ಮತ್ತು ವೈವಾಹಿಕ ತಾಣಗಳಲ್ಲಿ ನೂರಾರು ನಕಲಿ ಪ್ರೊಫೈಲ್‌ಗಳನ್ನು ಈತ ನಿರ್ವಹಿಸುತ್ತಿದ್ದ.

ಈತನ ವಂಚನೆಯ ಜಾಲ ಎಷ್ಟು ಕುತೂಹಲಕಾರಿಯೆಂದರೆ, ಒಮ್ಮೆ ಒಬ್ಬ ಯುವತಿಯ ವಿಶ್ವಾಸ ಗಳಿಸಿದ ಮೇಲೆ ಮದುವೆಯಾಗುವ ಭರವಸೆ ನೀಡುತ್ತಿದ್ದ. ಸಂತ್ರಸ್ತೆಯೊಬ್ಬರಿಂದ ಸುಮಾರು 7 ಲಕ್ಷ ರೂ. ದೋಚಲು ಈತ ಒಂದು ನಾಟಕವನ್ನೇ ಆಡಿದ್ದ.

ವೈಭವ್ ಅರೋರಾ ಹೆಸರಿನಲ್ಲಿ ಪ್ರೀತಿ ಬೆಳೆಸಿದ. ಆನಂದ್ ಎಂಬ ಸ್ನೇಹಿತನನ್ನು (ತಾನೇ ಮತ್ತೊಂದು ಧ್ವನಿಯಲ್ಲಿ) ಪರಿಚಯಿಸಿ ವಿಶ್ವಾಸ ಮೂಡಿಸಿದ. ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಹಣ ಪಡೆದ. ಸಂತ್ರಸ್ತೆ ಹಣ ವಾಪಸ್ ಕೇಳಿದಾಗ, ‘ವೈಭವ್ ಮೃತಪಟ್ಟಿದ್ದಾನೆ’ ಎಂಬ ಸುಳ್ಳು ಮಾಹಿತಿಯನ್ನು ವಾಟ್ಸಾಪ್ ಮೂಲಕ ರವಾನಿಸಿ ಕಣ್ಮರೆಯಾಗಲು ಯತ್ನಿಸಿದ್ದ.
ಬರೋಬ್ಬರಿ 500 ಬಲಿಪಶುಗಳು, 2 ಕೋಟಿ ರೂ. ಸುಲಿಗೆ
ಪೊಲೀಸರ ತನಿಖೆಯ ಪ್ರಕಾರ, ಈತ ಭಾರತದಾದ್ಯಂತ ಸುಮಾರು 500ಕ್ಕೂ ಹೆಚ್ಚು ಮಹಿಳೆಯರನ್ನು ಹನಿಟ್ರಾಪ್ ಮಾಡಿದ್ದಾನೆ. ಒಟ್ಟು 2 ಕೋಟಿ ರೂ. ಹಣವನ್ನು ಹೀಗೆ ಸುಲಿಗೆ ಮಾಡಲಾಗಿದೆ. ಕೇವಲ ಹಣವಷ್ಟೇ ಅಲ್ಲ, ಮಹಿಳೆಯರ ಖಾಸಗಿ ಫೋಟೋಗಳನ್ನು ಸಂಗ್ರಹಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕ್ರೂರತನವೂ ಈತನಲ್ಲಿತ್ತು.

ಪೊಲೀಸರ ಕಾರ್ಯಾಚರಣೆ ಮತ್ತು ವಶಪಡಿಸಿಕೊಂಡ ವಸ್ತುಗಳು
ಪಿಎಸ್ ಸೈಬರ್ ತಂಡವು ಐಪಿ ಲಾಗ್‌ಗಳು ಮತ್ತು ಡಿಜಿಟಲ್ ಹೆಜ್ಜೆಗುರುತುಗಳನ್ನು ಬೆನ್ನತ್ತಿ ಪಶ್ಚಿಮ ಬಂಗಾಳದಲ್ಲಿ ಈತನನ್ನು ಬಂಧಿಸಿದೆ.

ವಶಪಡಿಸಿಕೊಂಡ ವಸ್ತುಗಳು: 4 ಸ್ಮಾರ್ಟ್‌ಫೋನ್, 8 ಸಿಮ್ ಕಾರ್ಡ್‌ಗಳು, 4 ಚಿನ್ನದ ಬಳೆಗಳು ಮತ್ತು 5 ಚಿನ್ನದ ಸರಗಳು, ದೋಚಿದ ಹಣದ ಬಹುಪಾಲು ಮೊತ್ತವನ್ನು ಈತ ಆನ್‌ಲೈನ್ ಗೇಮಿಂಗ್ ಮತ್ತು ಐಷಾರಾಮಿ ಜೀವನಕ್ಕೆ ಖರ್ಚು ಮಾಡಿದ್ದಾನೆ.

ಎಚ್ಚರಿಕೆ ಗಂಟೆ
ಆನಂದ್ ಕುಮಾರ್ ಈ ಹಿಂದೆ ದೆಹಲಿ ಮತ್ತು ಗಾಜಿಯಾಬಾದ್‌ನಲ್ಲೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಳೆ ಆರೋಪಿ. ಈ ಘಟನೆಯು ಡೇಟಿಂಗ್ ಮತ್ತು ವೈವಾಹಿಕ ಆ್ಯಪ್‌ಗಳನ್ನು ಬಳಸುವವರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಅಪರಿಚಿತರ ಮಾತನ್ನು ನಂಬಿ ವೈಯಕ್ತಿಕ ಫೋಟೋ ಹಂಚಿಕೊಳ್ಳುವುದು ಅಥವಾ ಹಣದ ವರ್ಗಾವಣೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿ.​https://www.newsics.com/2026/04/16/yogesh-gowda-murder-case-mla-vinay-kulkarni-along-with-17-criminals-will-be-sentenced-tomorrow/

TAGGED:Fraudster who looted crores of rupees in the name of love arrested
Share This Article
Facebook Twitter Copy Link Print
Previous Article ಶಾಸಕ ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ.!
Next Article ಫ್ಯಾನ್‌ನಿಂದ ಬಿಸಿ ಗಾಳಿ ಬರುತ್ತಿದೆಯೇ? ಈ ‘ಐಸ್ ಬೌಲ್ ಹ್ಯಾಕ್’ ಟ್ರೈ ಮಾಡಿ

Popular Posts

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

You Might Also Like

ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?