Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು
ದೇಶಪ್ರಮುಖ

ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು

Share
3 Min Read
SHARE

ವೈದ್ಯಕೀಯ ವಿಜ್ಞಾನವು ಇಂದು ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾ ಮುನ್ನಡೆಯುತ್ತಿದೆ.

ಒಂದು ಕಾಲದಲ್ಲಿ ಕಲ್ಪನೆಗೂ ನಿಲುಕದ ವಿಷಯಗಳು ಇಂದು ವಾಸ್ತವವಾಗುತ್ತಿವೆ. ಹೌದು ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕೋಮಾದಲ್ಲಿರುವ ವ್ಯಕ್ತಿಯಿಂದ ವೀರ್ಯವನ್ನು ಹೊರತೆಗೆಯುವ ತಂತ್ರಜ್ಞಾನ. ಅಚ್ಚರಿಯೆನಿಸುತ್ತದಲ್ಲವೇ? ಇತ್ತೀಚೆಗೆ ದೆಹಲಿ ಹೈಕೋರ್ಟ್ ನೀಡಿದ ಒಂದು ಮಹತ್ವದ ತೀರ್ಪು ಈ ವಿಷಯದ ಚರ್ಚೆಯು ಮುನ್ನಲೆಗೆ ಬಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಆರೋಗ್ಯ ನಿಯತಕಾಲಿಕೆಗಳಲ್ಲಿ ಚರ್ಚಿತಗೊಳ್ಳುತ್ತಿವೆ.

ಇಂಡಿಯನ್ ಅರ್ಮಿ ಸೈನಿಕರೊಬ್ಬರು ದೀರ್ಘಕಾಲದಿಂದ ಕೋಮಾ ಸ್ಥಿತಿಯಲ್ಲಿದ್ದರು. ಆದರೆ ಆ ಸೈನಿಕನ ಪತ್ನಿಗೆ ತಾಯಿಯಾಗುವ ಹಂಬಲ! ಇತ್ತ ಪತಿ ನಿಶ್ಚಲವಾಗಿ ಕೋಮಸ್ಥಿತಿಯಲ್ಲಿ ಮಲಗಿದ್ದಾನೆ ಇಂಥ ಸ್ಥಿತಿಯಲ್ಲಿ ಪತ್ನಿ ಮಾಡಿದ್ದೇನೆಂದರೆ ಪತಿಯ ವೀರ್ಯವನ್ನು ಸಂರಕ್ಷಿಸಲು ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಮಾನವೀಯ ಹಿನ್ನೆಲೆ ತೀರ್ಪು ನೀಡಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ ಅವರು, ‘ಪತಿಯ ಲಿಖಿತ ಒಪ್ಪಿಗೆ ಇಲ್ಲ ಎಂಬ ಕಾರಣಕ್ಕೆ ಪತ್ನಿಯ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಈ ದಂಪತಿಗಳು ಮೊದಲೇ ಐವಿಎಫ್ (IVF) ಮೂಲಕ ಮಗು ಪಡೆಯಲು ಪ್ರಯತ್ನಿಸುತ್ತಿದ್ದರಿಂದ, ನ್ಯಾಯಾಲಯವು ಇದಕ್ಕೆ ಕಾನೂನು ಮಾನ್ಯತೆ ನೀಡಿತು. ಈ ತೀರ್ಪು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ರೋಗಿಗಳ ಕುಟುಂಬಕ್ಕೆ ಹೊಸ ಭರವಸೆ ನೀಡಿರುವುದಂತೂ ದಿಟ.

ಒಬ್ಬ ವ್ಯಕ್ತಿ ಅಪಘಾತದಿಂದಲೋ, ಇನ್ಯಾವುದೋ ದುರಂತದಿಂದಾಗಿ ಕೋಮಾಕ್ಕೆ ಹೋದಾಗ ಅವರ ದೇಹವು ಬಾಹ್ಯ ಪ್ರಪಂಚಕ್ಕೆ ಸ್ಪಂದಿಸುವುದಿಲ್ಲ, ಆದರೆ ಒಳಗಿನ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಇಂತಹ ಸ್ಥಿತಿಯಲ್ಲಿ ನೈಸರ್ಗಿಕವಾಗಿ ವೀರ್ಯ ಹೊರತೆಗೆಯಲು ಸಾಧ್ಯವಾಗದಿದ್ದಾಗ, ವೈದ್ಯರು ‘ಸರ್ಜಿಕಲ್ ಸ್ಪೆರ್ಮ್ ರಿಟ್ರೈವಲ್’ (SSR) ಎಂಬ ವಿಧಾನವನ್ನು ಬಳಸುತ್ತಾರೆ. ಇದು ಅತ್ಯಂತ ನಿಖರವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಮೂತ್ರಶಾಸ್ತ್ರಜ್ಞರು (Urologists) ನೇರವಾಗಿ ಸಂತಾನೋತ್ಪತ್ತಿ ಅಂಗಗಳಿಂದ ವೀರ್ಯವನ್ನು ಸಂಗ್ರಹಿಸುತ್ತಾರೆ.

ಈ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳನ್ನು ಬಳಸಲಾಗುತ್ತದೆ:

ಮೊದಲನೆಯದು, PESA (ಪರ್ಕ್ಯುಟೇನಿಯಸ್ ಎಪಿಡಿಡೈಮಲ್ ಸ್ಪೆರ್ಮ್ ಆಸ್ಪಿರೇಷನ್): ಇದರಲ್ಲಿ ವೃಷಣದ ಮೇಲಿರುವ ಕೊಳವೆಯಿಂದ (ಎಪಿಡಿಡೈಮಿಸ್) ಅತ್ಯಂತ ಸೂಕ್ಷ್ಮವಾದ ಸೂಜಿಯ ಮೂಲಕ ವೀರ್ಯವನ್ನು ಹೀರಿಕೊಳ್ಳಲಾಗುತ್ತದೆ.

TESA (ಟೆಸ್ಟಿಕುಲರ್ ಸ್ಪೆರ್ಮ್ ಆಸ್ಪಿರೇಷನ್): ಈ ವಿಧಾನದಲ್ಲಿ ವೈದ್ಯರು ನೇರವಾಗಿ ವೃಷಣದ ಅಂಗಾಂಶಕ್ಕೆ ಸೂಜಿಯನ್ನು ಚುಚ್ಚುವ ಮೂಲಕ ವೀರ್ಯವನ್ನು ಹೊರತೆಗೆಯುತ್ತಾರೆ. ಈ ಎರಡೂ ಪ್ರಕ್ರಿಯೆಗಳನ್ನು ಅರಿವಳಿಕೆ (Anesthesia) ನೀಡಿ ಮಾಡುವುದರಿಂದ ರೋಗಿಗೆ ಯಾವುದೇ ನೋವಾಗುವುದಿಲ್ಲ.

ಸಮಯ ಅತ್ಯಂತ ಮುಖ್ಯ

ಇಲ್ಲಿ ಸಮಯವೇ ಅತ್ಯಂತ ಪ್ರಮುಖವಾದುದು. ವ್ಯಕ್ತಿಯು ಕೋಮಾಕ್ಕೆ ಹೋದಾಗ ಅಥವಾ ಮೆದುಳು ನಿಷ್ಕ್ರಿಯಗೊಂಡಾಗ (Brain Dead), ವೀರ್ಯದ ಗುಣಮಟ್ಟ ಉತ್ತಮವಾಗಿರಲು 48 ರಿಂದ 72 ಗಂಟೆಗಳ ಒಳಗಾಗಿ ಈ ಪ್ರಕ್ರಿಯೆ ನಡೆಯಬೇಕು. ಸಮಯ ಕಳೆದಂತೆ ವೀರ್ಯದ ಚಲನಶೀಲತೆ ಮತ್ತು ಜೀವಿತಾವಧಿ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದಲೇ ಇಂತಹ ಪ್ರಕರಣಗಳಲ್ಲಿ ಕಾನೂನು ಪ್ರಕ್ರಿಯೆ ಮತ್ತು ವೈದ್ಯಕೀಯ ಚಿಕಿತ್ಸೆ ಎರಡೂ ವೇಗವಾಗಿ ನಡೆಯಬೇಕಾಗುತ್ತದೆ.
ಹೊರತೆಗೆದ ವೀರ್ಯವನ್ನು ಕೂಡಲೇ ಬಳಸಬೇಕೆಂದಿಲ್ಲ. ‘ಕ್ರಯೋಪ್ರೆಸರ್ವೇಶನ್’ (Cryopreservation)* ಎಂಬ ತಂತ್ರಜ್ಞಾನದ ಮೂಲಕ ಇದನ್ನು ದ್ರವ ಸಾರಜನಕವಿರುವ ಟ್ಯಾಂಕ್‌ಗಳಲ್ಲಿ ಅತಿ ಕಡಿಮೆ ತಾಪಮಾನದಲ್ಲಿ ಹೆಪ್ಪುಗಟ್ಟಿಸಿ ಸಂರಕ್ಷಿಸಲಾಗುತ್ತದೆ. ಈ ವಿಧಾನದಲ್ಲಿ ವೀರ್ಯವನ್ನು ಹಲವು ವರ್ಷಗಳವರೆಗೆ ಸುರಕ್ಷಿತವಾಗಿ ಇಡಬಹುದು. ಮುಂದೆ ಪತ್ನಿ ಅಥವಾ ಸಂಗಾತಿ ಸಿದ್ಧರಾದಾಗ IVF ಅಥವಾ ICSI ಚಿಕಿತ್ಸೆಯ ಮೂಲಕ ಗರ್ಭಧರಿಸಲು ಇದನ್ನು ಬಳಸಬಹುದು.

ಈ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತೆ?

ಭಾರತದಲ್ಲಿ ಈ ತಂತ್ರಜ್ಞಾನದ ವೆಚ್ಚ ಆಸ್ಪತ್ರೆ ಮತ್ತು ನಗರಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ PESA ಅಥವಾ TESA ನಂತಹ ಮೂಲಭೂತ ವಿಧಾನಗಳಿಗೆ ಅಂದಾಜು ₹25,000 ರಿಂದ ₹50,000 ವರೆಗೆ ಖರ್ಚಾಗಬಹುದು.

ಇನ್ನು ಸುಧಾರಿತ ತಂತ್ರ ಬಳಸುವುದಾದರೆ, ಒಂದು ವೇಳೆ ಮೈಕ್ರೋ-TESE ನಂತಹ ಸೂಕ್ಷ್ಮದರ್ಶಕ ಬಳಸಿ ಮಾಡುವ ಸುಧಾರಿತ ವಿಧಾನ ಬೇಕಿದ್ದರೆ, ವೆಚ್ಚ ₹1.2 ಲಕ್ಷಕ್ಕಿಂತ ಹೆಚ್ಚಾಗಬಹುದು.

ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಈ ದರಗಳು ಇನ್ನು ಸ್ವಲ್ಪ ಹೆಚ್ಚಿರಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದು ಅಗ್ಗವಾದರೂ, ಇಂತಹ ಸುಧಾರಿತ ಸೌಲಭ್ಯಗಳ ಲಭ್ಯತೆ ಸವಾಲಿನ ಕೆಲಸವಾಗಿದೆ.

ಗಮನಿಸಿ: ಇಲ್ಲಿ ಕೊಡಲಾಗಿರುವ ಮಾಹಿತಿ ಆರೋಗ್ಯ ನಿಯತಕಾಲಿಕೆಗಳಿಂದ ಪಡೆದ ಪ್ರಾಥಮಿಕ ಮಾಹಿತಿಯಾಗಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳೀಗೆ ವೈದ್ಯರನ್ನ ಸಂಪರ್ಕಿಸಿ.

 

ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾರ್?

TAGGED:If a wife longs to become a mothershe can get sperm even from a husband who is in a coma
Share This Article
Facebook Twitter Copy Link Print
Previous Article ಆಂಟಿ ಎಂದು ಕರೆವ ಮುನ್ನ ಎಚ್ಚರ!
Next Article ಶಾಸಕ ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ.!

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?