Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಆಂಟಿ ಎಂದು ಕರೆವ ಮುನ್ನ ಎಚ್ಚರ!
ಪ್ರಮುಖ

ಆಂಟಿ ಎಂದು ಕರೆವ ಮುನ್ನ ಎಚ್ಚರ!

Share
2 Min Read
SHARE

ಗಂಡಸರನ್ನು ಅಂಕಲ್​ ಎನ್ನದಿದ್ದರೂ ಹೆಂಗಸರನ್ನು ಕಂಡಾಕ್ಷಣ ಆಂಟಿ ಎನ್ನುವುದಕ್ಕೆ ಇದಾಗಲೇ ಹಲವಾರು ಮಂದಿ ಕೆಂಗಣ್ಣು ಬೀರುವುದು ಇದು. ಸೋಷಿಯಲ್​ ಮೀಡಿಯಾಗಳಲ್ಲಿ ಈ ಬಗ್ಗೆ ಆಗಾಗ್ಗೆ ಸಾಕಷ್ಟು ಚರ್ಚೆಯೂ ಆಗಿರುತ್ತದೆ. ಚಿಕ್ಕವರು ಆಂಟಿ ಎಂದರೇನೇ ಸಹಿಸದವರೂ ಇದ್ದಾರೆ, ಅದರಲ್ಲಿ ಅಪ್ಪ, ಅಜ್ಜನ ವಯಸ್ಸಿನವರೂ ಆಂಟಿ ಎಂದಾಗ ಹಲವರಿಗೆ ನಖಶಿಖಾಂತ ಉರಿ ಹತ್ತುವುದು ಇದೆ.

ಎರಡು ಲಕ್ಷ ರೂ. ಪರಿಹಾರ

ಇದೀಗ ಹೀಗೆಯೇ ಆಂಟಿ ಎಂದು ಕರೆದುದಕ್ಕಾಗಿ ಆಸಾಮಿಯೊಬ್ಬ ಮಹಿಳೆಗೆ ಸುಮಾರು ಎರಡು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕಾಗಿ ಬಂದಿದೆ. ಹೀಗೆ ಕಂಡಕಂಡವರನ್ನು ಆಂಟಿ ಎಂದು ಕರೆಯುವುದು ಕಿರುಕುಳಕ್ಕೆ ಸಮಾನ ಎಂದಿದೆ ಕೋರ್ಟ್​. ಆದ್ದರಿಂದ ಆಂಟಿ ಎಂದು ಕಂಡಕಂಡವರನ್ನು ಕರೆಯುವ ಮುನ್ನ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು. ಹಾಗೆಂದು ಈ ಕೇಸ್​ ನಡೆದಿರುವುದು ಭಾರತದಲ್ಲಿ ಅಲ್ಲ ಬಿಡಿ, ಅಷ್ಟರಮಟ್ಟಿಗೆ ‘ಆಂಟಿ’ ಪ್ರಿಯರು ಸಮಾಧಾನ ಮಾಡಿಕೊಳ್ಳಬಹುದು. ಆದರೆ ಹಾಗೆಂದು ಖುಷಿಪಡಬೇಡಿ. ಏಕೆಂದರೆ ಈ ಕೇಸ್​ನಲ್ಲಿ ಪರಿಹಾರ ಪಡೆದುಕೊಂಡಿರುವವಳು ಭಾರತದವಳು! ತನ್ನನ್ನು ಆಂಟಿ ಎಂದು ಕರೆಯಬೇಡ ಎಂದು ಈ ಹಿಂದೆ ಹೇಳಿದ್ದರೂ ಆತ ಅದೇ ಶಬ್ದ ಹೇಳುತ್ತಿದ್ದುದರಿಂದ ಕೇಸ್​ ದಾಖಲಿಸಿದ್ದಳು 61ರ ಹರೆಯದ ಮಹಿಳೆ.

ನಡೆದದ್ದೆಲ್ಲಿ?

ಇದು ನಡೆದಿರುವುದು ಲಂಡನ್​ನಲ್ಲಿ. ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ (NHS) ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಆರೋಗ್ಯ ಸಹಾಯಕಿಯೊಬ್ಬಳು, ನರ್ಸ್​ ಒಬ್ಬ ತನ್ನನ್ನು ಆಂಟಿ ಎಂದು ಕರೆದುದ್ದಕ್ಕೆ ಅಲ್ಲಿಯ ಕೋರ್ಟ್​ನಲ್ಲಿ ಕಿರುಕುಳದ ಕೇಸ್​ ದಾಖಲಿಸಿ ಗೆದ್ದಿದ್ದಾಳೆ. ವ್ಯಾಟ್‌ಫೋರ್ಡ್ ಉದ್ಯೋಗ ನ್ಯಾಯಮಂಡಳಿ ನ್ಯಾಯಾಧೀಶ ಜಾರ್ಜ್ ಅಲಿಯಟ್ ಅವರು, ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಕಿರುಕುಳಕ್ಕೊಳಗಾಗಿದ್ದಾರೆ ಎಂದು ತೀರ್ಪು ನೀಡಿದ್ದಾರೆ. “ಭಾವನೆಗಳಿಗೆ ಘಾಸಿ” ಮಾಡಿದ್ದಕ್ಕಾಗಿ ಒಟ್ಟು 1,425.15 ಪೌಂಡ್‌ಗಳ ಪರಿಹಾರವನ್ನು ಪಾವತಿಸಲು ವೆಸ್ಟ್ ಲಂಡನ್ NHS ಟ್ರಸ್ಟ್‌ಗೆ ನಿರ್ದೇಶಿಸಿದ್ದಾರೆ. ಈ ಪರಿಹಾರವನ್ನು ಆಂಟಿ ಎಂದು ಕರೆದ ನರ್ಸ್​ ಮೂಲಕ ವಸೂಲಿ ಮಾಡುವುದು ಸದ್ಯ ಟ್ರಸ್ಟ್​ಗೆ ಇರುವ ಕೆಲಸ.

ಕಿರುಕುಳಕ್ಕೆ ಸಮ

ಕಳೆದ ವರ್ಷ ಈ ಕೇಸ್​ ದಾಖಲಾಗಿತ್ತು. ಅಷ್ಟಕ್ಕೂ ಕೇಸ್​ ದಾಖಲು ಮಾಡಿರುವುದು 61 ವರ್ಷದ ಮಹಿಳೆ ಎಸ್ಟೀವ್ಸ್. ಇದರ ಸತ್ಯಾಸತ್ಯತೆ ಪರಿಶೀಲಿಸಲು ಮೂವರು ನ್ಯಾಯಾಧೀಶರ ಸಮಿತಿ ನೇಮಕ ಮಾಡಲಾಗಿತ್ತು. “ಆಂಟಿ” ಎಂಬುದು ಘಾನಾದ ಸಂಸ್ಕೃತಿಯಲ್ಲಿ ವಯಸ್ಸಾದವರಿಗೆ ಗೌರವದ ಪದವಾಗಿದೆ ಎಂದು ಸಮಿತಿ ಒಪ್ಪಿಕೊಂಡಿದೆ. ಆದಾಗ್ಯೂ, ಸ್ಟಾಫ್ ನರ್ಸ್ ವಾರ್ಡ್‌ನಲ್ಲಿ ತಂಡಗಳನ್ನು ಮುನ್ನಡೆಸುವ ಜವಾಬ್ದಾರರಾಗಿದ್ದಾರೆ. ಆದ್ದರಿಂದ ಅವರು ಇಂಥ ಹೇಳಿಕೆಗಳನ್ನು ನೀಡಿರುವುದು ತಪ್ಪು ಎನ್ನುವುದಾಗಿ ತೀರ್ಪು ನೀಡಲಾಗಿದೆ. “ಚಾರ್ಲ್ಸ್ ಒಪ್ಪೋಂಗ್ ಅವರ ಉದ್ದೇಶವು ಬಹುಶಃ ಹಾಸ್ಯದ ಆಕ್ರಮಣಕಾರಿ ಪ್ರಯತ್ನವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾರ್?

TAGGED:Be careful before calling her 'Auntie'! Court orders Rs 2 lakh compensation - What is the case?
Share This Article
Facebook Twitter Copy Link Print
Previous Article ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ನ್ಯಾ.ಸಂತೋಷ್ ಗಜಾನನ ಭಟ್ ಟ್ರಾನ್ಸ್‌ಫರ್
Next Article ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?