newsics.com
ಇಸ್ಲಾಮಾಬಾದ್ : ಖ್ಯಾತ ಗಾಯಕಿ, ಪದ್ಮವಿಭೂಷಣ ಆಶಾ ಭೋಸ್ಲೆ ನಿಧನ ( 92 ) ಅವರು ಚಿಕಿತ್ಸೆ ಫಲಿಸದೆ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಆಶಾ ಭೋಸ್ಲೆ ಅವರು ಹಿಂದಿಯಷ್ಟೇ ಅಲ್ಲದೆ, ಕನ್ನಡ ಹಾಡುಗಳನ್ನು ಕೂಡಾ ಹಾಡಿದ್ದರು. ಆಶಾ ಭೋಸ್ಲೆ ಮತ್ತೆ ಮುಂಗಾರು ಚಿತ್ರದಲ್ಲಿ ಹಾಡಿದ್ದರು.
ಆದರೆ ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ನೋಟಿಸ್ ಜಾರಿ ಮಾಡಿ, ಪಾಕಿಸ್ತಾನದ ಸುದ್ದಿ ವಾಹಿನಿಗಳು ಭಾರತದ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ವರದಿ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ.
ಆಶಾ ಭೋಸ್ಲೆ ಏಪ್ರಿಲ್ 12ರಂದು ಮುಂಬೈನಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಡಾನ್ ಎಂಬ ಪಾಕಿಸ್ತಾನದ ಮಾಧ್ಯಮ ಇಂದು ಗಾಯಕಿ ಆಶಾ ಭೋಸ್ಲೆ ಅವರ ಕುರಿತಾದ ಲೇಖನದಲ್ಲಿ ‘ಅವರ ಸಂಗೀತವು ಗಡಿಗಳನ್ನು ಮೀರಿ, ಅನೇಕ ಪಾಕಿಸ್ತಾನಿಗಳ ಹೃದಯಗಳನ್ನು ಮುಟ್ಟಿತು’ ಎಂದು ಹೇಳಿದೆ.
ಪಾಕಿಸ್ತಾನದೊಂದಿಗಿನ ಅವರ ಸಂಪರ್ಕ ಮತ್ತು ಪಾಕಿಸ್ತಾನದಲ್ಲಿ ಅವರ ಹೆಸರಿನ ಬಗ್ಗೆ ಇರುವ ಗೊಂದಲದ ಬಗ್ಗೆಯೂ ಆ ಸುದ್ದಿಯಲ್ಲಿ ವಿವರಿಸಲಾಗಿತ್ತು. ಜಿಯೋ ನ್ಯೂಸ್ ಕೂಡ ಅವರಿಗೆ ಸಂಬಂಧಿಸಿದ ವಿಷಯವನ್ನು ಪ್ರಸಾರ ಮಾಡಿತ್ತು. ಈಗ ಆ ಮಾಧ್ಯಮಗಳಿಗೆ ನೋಟಿಸ್ ನೀಡಲಾಗಿದೆ. ಪಾಕಿಸ್ತಾನದ ಹೆಚ್ಚಿನ ಪತ್ರಕರ್ತರು ಮತ್ತು ಈ ನೋಟಿಸ್ ಅನ್ನು ಖಂಡಿಸಿದ್ದಾರೆ.
ಆಶಾ ಭೋಸ್ಲೆ ದೇಶದ ಗಡಿಯನ್ನು ಮೀರಿದ ಗಾಯಕಿ. ಆಶಾ ಭೋಸ್ಲೆ ಸ್ವತಃ ಪಾಕಿಸ್ತಾನದ ಪ್ರಸಿದ್ಧ ಗಾಯಕಿ ನೂರ್ ಜಹಾನ್ ಅವರನ್ನು ಮೆಚ್ಚಿಕೊಂಡಿದ್ದರು. ಅವರನ್ನು ಪ್ರೀತಿಯಿಂದ ‘ಅಕ್ಕ’ ಎಂದು ಕರೆಯುತ್ತಿರು. ಅವರು ನುಸ್ರತ್ ಫತೇಹ್ ಅಲಿ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನಾಸಿರ್ ಕಾಜ್ಮಿಯಂತಹ ಶ್ರೇಷ್ಠ ಉರ್ದು ಕವಿಗಳ ಕಾವ್ಯಕ್ಕೆ ಅವರು ಜೀವ ತುಂಬಿದ್ದರು’ ಎಂದು ಪತ್ರಕರ್ತ ಅಬ್ಬಾಸ್ ಹೇಳಿದ್ದಾರೆ.
https://www.newsics.com/2026/04/14/what-was-the-cause-of-the-death-of-tourist-srinanda/