Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗಾಯಕಿ ಆಶಾ ಭೋಸ್ಲೆ ಬಗ್ಗೆ ಗೊತ್ತಿರದ ವಿಷಯಗಳು…
ಪ್ರಮುಖಮನರಂಜನೆ

ಗಾಯಕಿ ಆಶಾ ಭೋಸ್ಲೆ ಬಗ್ಗೆ ಗೊತ್ತಿರದ ವಿಷಯಗಳು…

Share
2 Min Read
SHARE

ಭಾರತ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ  ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. ಆಶಾ ಭೋಸ್ಲೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಂದಿ, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಆಶಾ ಭೋಸ್ಲೆ ಹಾಡಿದ್ದರು. ಸುಮಾರು 80ಕ್ಕೂ ಹೆಚ್ಚು ವರ್ಷ ಅವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.

ಆಶಾ ಭೋಸ್ಲೆ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಆಶಾ ಅವರು ರಷ್ಯಾ ಮತ್ತು ಮಲಯ ಭಾಷೆಯಲ್ಲಿಯೂ ಹಾಡು ಹಾಡಿರುವುದು ವಿಶೇಷ.
ಆಶಾ ಭೋಸ್ಲೆ ಅವರು ಬಹಳ ಕಡಿಮೆ ವಯಸ್ಸಿನಲ್ಲೇ ಹಾಡಲು ಆರಂಭಿಸಿದರು. ಅವರು ಕೇವಲ 3 ವರ್ಷದವರಿರುವಾಗಲೇ ಸಂಗೀತ ಅಭ್ಯಾಸ ಆರಂಭಿಸಿದ್ದರು. ಮೊದಲ ಹಾಡು ಹಾಡಿದಾಗ ಅವರಿಗೆ ಕೇವಲ 10 ವರ್ಷ.
ಆಶಾ ಭೋಸ್ಲೆ ಅವರಿಗೆ ಗೌರವಪೂರ್ವಕವಾಗಿ ಬ್ರಿಟೀಷ್​​ ಬ್ಯಾಂಡ್ ಒಂದು ಆಶಾ ಅವರಗಾಗಿಯೇ ಆಲ್ಬಂ ಒಂದನ್ನು ಹೊರತಂದಿದೆ. ‘ಬ್ರಿಮ್​​ಫುಲ್ ಆಫ್ ಆಶಾ’ ಹೆಸರಿನ ಈ ಆಲ್ಬಂ 1997 ರಲ್ಲಿ ಬಿಡುಗಡೆ ಆಗಿತ್ತು.
ಆಶಾ ಭೋಸ್ಲೆ 16ರ ವಯಸ್ಸಿನಲ್ಲೇ ಓಡಿ ಹೋಗಿ 31 ವರ್ಷದ ಗಣಪತ್ ರಾವ್ ಭೋಸ್ಲೆ ಎಂಬಾತನ ವಿವಾಹವಾದರು. ಆ ವಿವಾಹದಿಂದ ತೀವ್ರ ಕಷ್ಟಗಳನ್ನು ಅವರು ಅನುಭವಿಸಿದರು.
ಆಶಾ ಭೊಸ್ಲೆ ಅವರು ತಮ್ಮ 20ನೇ ವಯಸ್ಸಿನಲ್ಲಿ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಅವರು ನಾಲ್ಕು ತಿಂಗಳ ಗರ್ಭಿಣಿ.
ಒಂದು ಸಮಯದಲ್ಲಿ ಅಕ್ಕ ಲತಾ ಮಂಗೇಶ್ಕರ್ ಅವರಿಗಿಂತಲೂ ಹೆಚ್ಚು ಹಾಡುಗಳನ್ನು ಆಶಾ ಭೊಸ್ಲೆ ಹಾಡಿದ್ದರು. ಆದರೆ ‘ನನ್ನ ಅಕ್ಕ ನನಗಿಂತ ಹೆಚ್ಚು ಪ್ರತಿಭಾವಂತೆ’ ಎಂದಿದ್ದರು ಆಶಾ.
ಆಶಾ ಭೊಸ್ಲೆ ಮತ್ತು ಲತಾ ಮಂಗೇಶ್ಕರ್ ಹಲವು ವರ್ಷ ಪರಸ್ಪರ ಮಾತನಾಡಿರಲಿಲ್ಲ. ಪ್ರೀತಿಸಿದವನೊಟ್ಟಿಗೆ ಓಡಿ ಹೋಗಿದ್ದ ಆಶಾ ಮೇಲೆ ವಿಪರೀತ ಸಿಟ್ಟಿತ್ತು ಲತಾ ಅವರಿಗೆ. ವಯಸ್ಸಾದಂತೆ ಅದು ಕರಗಿತು.
ಪಾಪ್ ಮತ್ತು ಹಿಪ್ ಹಾಪ್ ರೀತಿಯ ಹಾಡುಗಳ ಟ್ರೆಂಡ್ ಆರಂಭಕ್ಕೂ ಮುಂಚೆಯೇ ಅವುಗಳನ್ನು ಹಾಡಿದ್ದರು ಆಶಾ ಭೋಸ್ಲೆ. ಭಾರತದ ಮೊದಲ ಪಾಪ್, ಹಿಪ್-ಹಾಪ್ ಹಾಡುಗಾರ್ತಿ ಆಶಾ ಭೋಸ್ಲೆ.
2011 ರಲ್ಲಿ ಆಶಾ ಭೋಸ್ಲೆ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿಕೊಂಡಿತು. ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ದಾಖಲೆ ಅವರ ಹೆಸರಲ್ಲಿದೆ. ಆಗಲೇ ಅವರು 11 ಸಾವಿರಕ್ಕೂ ಹೆಚ್ಚು ಹಾಡುಗಳ ರೆಕಾರ್ಡ್ ಮಾಡಿದ್ದರು.
ಸಂಗೀತಕ್ಕೆ ನೀಡಲಾಗುವ ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದೆನಿಸಿಕೊಂಡಿರುವ ಗ್ರಾಮಿಗೆ ನಾಮಿನೇಟ್ ಆದ ಮೊದಲ ಭಾರತೀಯರು ಆಶಾ ಭೋಸ್ಲೆ. ಎರಡು ಬಾರಿ ಅವರು ನಾಮಿನೇಟ್ ಆಗಿದ್ದಾರೆ.
ಹಲವಾರು ವಿದೇಶಿ ಗಾಯಕರುಗಳೊಟ್ಟಿಗೆ ಆಶಾ ಭೋಸ್ಲೆ ಕೊಲ್ಯಾಬ್ ಆಗಿ ಕೆಲಸ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರೊಟ್ಟಿಗೆ ಸಹ ಒಂದು ಹಾಡು ಮಾಡಿದ್ದಾರೆ ಆಶಾ ಭೋಸ್ಲೆ.
ಆಶಾ ಭೋಸ್ಲೆ ಅದ್ಭುತವಾಗಿ ಅಡುಗೆ ಮಾಡುತ್ತಿದ್ದರು. ಕಪೂರ್ ಕುಟುಂಬಕ್ಕೆ ಆಶಾ ಭೋಸ್ಲೆ ಅವರ ಕೈಯಡುಗೆ ಬಹಳ ರುಚಿಸುತ್ತಿತ್ತು. ಇದೇ ಕಾರಣಕ್ಕೆ ಕಪೂರ್ ಕುಟುಂಬಕ್ಕೆ ಆಶಾ ಬಲು ಹತ್ತಿರವಾಗಿದ್ದರು.
ಆಶಾ ಭೋಸ್ಲೆ ಉದ್ಯಮಿ ಸಹ ಹೌದು. ‘ಆಶಾಸ್ ಕಿಚನ್’ ಹೆಸರಿನ ರೆಸ್ಟೊರೆಂಟ್ ಸಹ ಸ್ಥಾಪಿಸಿದರು. ದುಬೈ, ಕುವೈತ್, ಲಂಡನ್ ಹಲವೆಡೆ ಅವರ ರೆಸ್ಟೊರೆಂಟ್​​ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.

Unknown facts about singer Asha Bhoslehttps://www.newsics.com/2026/04/12/why-did-the-talks-between-america-and-iran-break-down/

TAGGED:Things you didn't know about singer Asha Bhosle...
Share This Article
Facebook Twitter Copy Link Print
Previous Article ಅಮೆರಿಕ ಮತ್ತು ಇರಾನ್​ ನಡುವಿನ ಮಾತುಕತೆ ಮುರಿದು ಬಿದ್ದಿದ್ಯಾಕೆ?
Next Article ಬ್ಯುಸಿ ಲೈಫ್‌ನಲ್ಲಿ ಶೂ ಕ್ಲೀನ್ ಮಾಡೋಕೆ ಟೈಮ್ ಇಲ್ಲವಾ? ಈ ಟ್ರಿಕ್ಸ್ ಫಾಲೋ ಮಾಡಿ

Popular Posts

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read
ದೇಶಪ್ರಮುಖ

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read
ಕರ್ನಾಟಕಪ್ರಮುಖ

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

Social Networks

Facebook-f Instagram Twitter
Welcome Back!

Sign in to your account

Lost your password?