newsics.com
ನವದೆಹಲಿ: ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಬೃಹತ್ ಪ್ರಮಾಣದ ಉದ್ಯೋಗ ಕಡಿತಕ್ಕೆ nun ಈ ಬಾರಿ ಸುಮಾರು 14,000 ಕಾರ್ಪೊರೇಟ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 2025 ರಲ್ಲಿ 14,000 ಮತ್ತು ಜನವರಿ 2026 ರಲ್ಲಿ 16,000 ಉದ್ಯೋಗಿಗಳನ್ನು ವಜಾ ಮಾಡಿದ್ದ ಅಮೆಜಾನ್, ಈಗ ಮೇ 2026 ರ ವೇಳೆಗೆ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಈ ಬಾರಿ ಪ್ರಮುಖವಾಗಿ AWS , ರಿಟೇಲ್ (Retail) ಮತ್ತು ಮಾನವ ಸಂಪನ್ಮೂಲ (HR) ವಿಭಾಗದ ಕಾರ್ಪೊರೇಟ್ ಉದ್ಯೋಗಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.
ಈ ಹಂತದ ವಜಾ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಮಧ್ಯಮ ಹಂತದ ಮ್ಯಾನೇಜರ್‌ಗಳು (L5 ರಿಂದ L7 ಹಂತದ ಅಧಿಕಾರಿಗಳು) ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.
ಕಂಪನಿಯ ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡುವುದು, ಅಧಿಕಾರಿಗಳ ಸಂಖ್ಯೆಯನ್ನು ತಗ್ಗಿಸಿ ಕೆಲಸದ ವೇಗವನ್ನು ಹೆಚ್ಚಿಸುವುದು ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವುದು ಈ ನಿರ್ಧಾರದ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ.