https://youtube.com/shorts/w77Qj39UtDA?si=G-t7V0TrkmzYuWQ5
newsics.com
ಅಶ್ಲೀಲ ಸಾಹಿತ್ಯ ಹೊಂದಿದ್ದ ‘ವಾಲ್ಯೂಮ್ 1’ ಹಾಡನ್ನು ಡಿಲೀಟ್ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಈ ಹಾಡು ಅಶ್ಲೀಲತೆಯಿಂದ ಕೂಡಿದ್ದು, ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಕಳೆದ ತಿಂಗಳಷ್ಟೇ ಬಾದ್‌ಶಾ ಅವರ ಮತ್ತೊಂದು ಹಾಡು ‘ಟಟೀರಿ’ ಕೂಡ ವಿವಾದಕ್ಕೆ ಸಿಲುಕಿತ್ತು. ಈ ಹಾಡಿನ ಸಾಹಿತ್ಯವು ಕೇವಲ ಆಕ್ಷೇಪಾರ್ಹ ಮಾತ್ರವಲ್ಲ, ಬದಲಿಗೆ ಮಹಿಳೆಯರನ್ನು ಲೈಂಗಿಕ ವಸ್ತುವಿನಂತೆ ಬಿಂಬಿಸುವ ಮತ್ತು ಅವರನ್ನು ಅಪಹಾಸ್ಯ ಮಾಡುವಂತಿದೆ ಎಂದು ಕೋರ್ಟ್ ಹೇಳಿದೆ.
ಈ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಅತಿರೇಕದ ಅಶ್ಲೀಲತೆಯಿಂದ ಕೂಡಿವೆ ಎಂದು ಜನರು ಕಿಡಿಕಾರಿದ್ದರು. ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ ಬಾದ್‌ಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮೆಯಾಚಿಸಿ, ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.
https://www.newsics.com/2026/04/02/raghav-chadha-removed-from-rajya-sabha-deputy-leader-post/