https://youtube.com/shorts/JFDfzeRUAUw?si=UPiQjhCFAIkLXEhb
newsics.com
ಇರಾನ್ ಯುದ್ಧ ಕಾರಣಕ್ಕೆ ಸಾಲು ಸಾಲು ಸಂಕಷ್ಟ ಎದುರಾಗುತ್ತಿದ್ದು, ಭಾರತದಲ್ಲಿ ಈಗಾಗಲೇ ಈ ವಿಚಾರವಾಗಿ ಎಲ್‌ಪಿಜಿ ಸಮಸ್ಯೆ ಭುಗಿಲೆದ್ದು ಜನರು ಪರದಾಡುತ್ತಿದ್ದಾರೆ. ಹಾಗೇ ತೈಲ ಬೆಲೆ ಕೂಡ ಈ ಹಂತದಲ್ಲಿ ಹೆಚ್ಚಾಗುವ ಭೀತಿ ಮೂಡಿದ್ದು, ಸಾಲು ಸಾಲು ಕಂಟಕದ ನಡುವೆ ಭಾರತೀಯರೆಲ್ಲಾ ಬಳಲುತ್ತಿದ್ದಾರೆ.
ಇಸ್ರೇಲ್ ಹಾಗೂ ಅಮೆರಿಕ ಸೇನೆಗಳು ಒಟ್ಟಾಗಿ ಇರಾನ್ ವಿರುದ್ಧ ಯುದ್ಧ ಸಾರಿದ ನಂತರ ಈ ತಿಕ್ಕಾಟದ ಪರಿಣಾಮ ಮಧ್ಯಪ್ರಾಚ್ಯ ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ, ಯುದ್ಧದ ಕಿಚ್ಚು ಭಾರತದ ಮಾರುಕಟ್ಟೆಗೂ ಲಗ್ಗೆಯಿಟ್ಟು ನಾನಾ ಸಮಸ್ಯೆ ಸೃಷ್ಟಿ ಮಾಡುತ್ತಿದೆ.
ಕಮರ್ಷಿಯಲ್ ಸಿಲಿಂಡರ್ ಸರಬರಾಜಲ್ಲಿ ಏರುಪೇರು ಉಂಟಾಗಿರುವ ಕಾರಣ, ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿ ಒದ್ದಾಡಿದ್ದಾರೆ. ಇದೇ ಸಮಯದಲ್ಲಿ ಮತ್ತೊಂದು ಶಾಕ್ ಕೂಡ ಸಿಕ್ಕಿದ್ದು, ಅಡುಗೆ ಎಣ್ಣೆಗೂ ಈಗ ಪರದಾಟ ಶುರುವಾಗುವ ಲಕ್ಷಣ ಗೋಚರಿಸಿದೆ.