https://youtube.com/shorts/NQT6o3FTgxQ?si=QO7iNw2quSngYXpc
newsics.com
ವಾಷಿಂಗ್ಟನ್ : ಇರಾನ್‌ನ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯ ನಡುವೆ, ಖಮೇನಿ ಜಾಗಕ್ಕೆ ಆಯ್ಕೆಯಾಗಿರುವವರ ಹೆಸರಿನ ಘೋಷಣೆಯಷ್ಟೇ ಬಾಕಿ ಇರುವ ಹೊತ್ತಿನಲ್ಲಿ ಇಸ್ರೇಲ್, ‘ನೂತನ ನಾಯಕನಾಗಿ ಆಯ್ಕೆಯಾಗುವವರನ್ನು ಹತ್ಯೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದೆ. ಈ ಮಧ್ಯೆ 88 ಹಿರಿಯ ಧಾರ್ಮಿಕ ಮುಖಂಡರ ತಂಡ ಒಬ್ಬನ ಹೆಸರನ್ನು ಅಂತಿಮಗೊಳಿಸಿದೆ.
ಇರಾನಿಗರು ಮತ್ತೆ 10 ವರ್ಷಗಳ ಹಿಂದಿನಂತೆ ಆಗುವುದು ಬೇಡ’ ಎನ್ನುವ ಮೂಲಕ ದಶಕದ ಹಿಂದೆ ಇರಾನ್ ಮೇಲಿನ ಅಮೆರಿಕದ ದಾಳಿಯನ್ನು ನೆನಪಿಸುತ್ತಾ, ಈಗ ಮತ್ತೆ ಅಂತಹ ದಾಳಿಯಾಗುವುದನ್ನು ತಪ್ಪಿಸಲು ಮುಂದಿನ ನಾಯಕನ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಅಭಿಪ್ರಾಯವನ್ನೂ ಪರಿಗಣಿಸಿ ಎಂದಿದ್ದಾರೆ.
ಇದೇ ವೇಳೆ ಇರಾನ್ ಮೇಲಿನ ಆಕ್ರಮಣಕ್ಕೆ ಇನ್ನೊಂದು ಕಾರಣವನ್ನೂ ನೀಡಿರುವ ಅವರು, ‘ಇರಾನ್‌ನವರು ಇಡೀ ಮಧ್ಯಪ್ರಾಚ್ಯವನ್ನು ವಶಪಡಿಸಿಕೊಳ್ಳುವ ಬಯಕೆಯಲ್ಲಿದ್ದರು. ಆದರೆ ನಾನದನ್ನು ತಪ್ಪಿಸಿದೆ’ ಎಂದು ಹೇಳಿದರು.
https://www.newsics.com/2026/03/09/womans-two-legs-amputated-after-getting-caught-in-chariot-wheel/