newsics.com
ಕಡಿಮೆ ದರಕ್ಕೆ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜನಪ್ರಿಯತೆ ಗಳಿಸಿರುವ ಇ-ಕಾಮರ್ಸ್ ದೈತ್ಯ ಮೀಶೋ ಈಗ ಸಂಕಷ್ಟಕ್ಕೆ ಸಿಲುಕಿದೆ. ಆದಾಯ ತೆರಿಗೆ ಇಲಾಖೆಯು ಕಂಪನಿಗೆ ಬರೋಬ್ಬರಿ ₹1,500 ಕೋಟಿ($1.5 ಬಿಲಿಯನ್) ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
2022-23ರ ಹಣಕಾಸು ವರ್ಷದಲ್ಲಿ ಮೀಶೋ ತನ್ನ ನೈಜ ಆದಾಯವನ್ನು ಕಡಿಮೆ ತೋರಿಸಿದೆ ಮತ್ತು ಆದಾಯದ ಅಂಕಿಅಂಶಗಳಲ್ಲಿ ವ್ಯತ್ಯಾಸಗಳಿವೆ ಎಂದು ಐಟಿ ಇಲಾಖೆ ಆರೋಪಿಸಿದೆ.
ಮೀಶೋಗೆ ಇಂತಹ ನೋಟಿಸ್‌ಗಳು ಹೊಸದೇನಲ್ಲ. 2022ರ ಹಣಕಾಸು ವರ್ಷದಲ್ಲೂ ₹572 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್ ಬಂದಿತ್ತು. ಆ ಪ್ರಕರಣ ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಕೋರ್ಟ್ ತಡೆಯಾಜ್ಞೆ (Stay) ನೀಡಿದೆ.
ಐಟಿ ಇಲಾಖೆಯ ಈ ನೋಟಿಸ್ ಅನ್ನು ಮೀಶೋ ಆಡಳಿತ ಮಂಡಳಿ ನಿರಾಕರಿಸಿದೆ. ತಮ್ಮ ಹಣಕಾಸಿನ ವಹಿವಾಟಿನ ಮೇಲೆ ಇದು ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಮತ್ತು ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕಂಪನಿ ತಿಳಿಸಿದೆ.
https://www.newsics.com/2026/03/09/279-international-flights-to-middle-eastern-countries-cancelled/