newsics.com
ಸತತ ಎರಡನೇ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ನಲ್ಲಿ ಟೀಮ್ ಇಂಡಿಯಾ 96 ರನ್ ಗಳಿಂದ ಜಯಗಳಿಸಿತು.ಸಂಜುರ ಧೃಡ ಸಂಕಲ್ಪ ಮತ್ತು ದಾಖಲೆ ನಿರ್ಮಾಣದ ಆಟಕ್ಕೆ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಲಭಿಸಿತು.
ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ಗೆ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೆ ತುತ್ತಾದ ಕಾರಣ ಸಂಜುಗೆ ಆಡುವ ಅವಕಾಶ ಸಿಕ್ಕಿತು. ನಮೀಬಿಯಾ ವಿರುದ್ಧದ ಲೀಗ್ ಪಂದ್ಯದಲ್ಲಿ 22 ರನ್ ಬಾರಿಸಿದ ಸಂಜುಗೆ ನಂತರ ಅವಕಾಶ ಸಿಗಲಿಲ್ಲ. ಆದರೆ ಅಭಿಷೇಕ್ ಶರ್ಮಾರ ಕಳಪೆ ಪ್ರದರ್ಶನ ಹಾಗೂ ರಿಂಕು ಸಿಂಗ್ ಅವರ ತಂದೆಯ ನಿಧನದಿಂದಾಗಿ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡ ಸಂಜು ಆ ನಂತರ ನಿರ್ಮಿಸಿದ್ದು ಇತಿಹಾಸ.
ಈ ಪ್ರದರ್ಶನಕ್ಕಾಗಿ, ಸಂಜು ಅವರಿಗೆ ಸರಣಿ ಶೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಂಜು ಸ್ಯಾಮ್ಸನ್ ಈ ಪ್ರಶಸ್ತಿಯನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲಿಸಿದ್ದಾರೆ.
ಪ್ರಶಸ್ತಿ ಪಡೆದು ಮಾತಾಡಿದ ಸಂಜು ಸ್ಯಾಮ್ಸನ್, “ಇದು ನನಗೆ ಕನಸಿನಂತೆ ಭಾಸವಾಗುತ್ತಿದೆ. ನನಗೆ ತುಂಬಾ ಸಂತೋಷ ಮತ್ತು ಕೃತಜ್ಞತಾ ಭಾವ ಇದೆ. ಈ ಪ್ರಯಾಣ ಒಂದು ಅಥವಾ ಎರಡು ವರ್ಷಗಳ ಹಿಂದೆ ಪ್ರಾರಂಭವಾಯಿತು, ನಾನು 2024 ರ ವಿಶ್ವಕಪ್ ತಂಡದಲ್ಲಿದ್ದೆ, ಆದ್ರೆ ನನಗೆ ಆಡಲು ಅವಕಾಶ ಸಿಗಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ, ನಾನು ಸೋತು ಬಿದ್ದಿದ್ದೆ. ನನ್ನ ಕನಸು ಭಗ್ನಗೊಂಡಿದೆ ಎಂದು ನನಗೆ ಅನಿಸಿತು, ನನಗೆ ಏನ್ ಮಾಡ್ಬೇಕೆಂದು ಗೊತ್ತಾಗದೇ ಕೂತಿದ್ದೆ. ಆಗ ನನಗೆ ಸ್ಫೂರ್ತಿ ತುಂಬಿದವರು ನನ್ನ ಕ್ರಿಕೆಟ್ ದೇವರು ಎಂದು ಸಂಜು ಸ್ಯಾಮ್ಸನ್ ಹೇಳಿದ್ರು.
https://www.newsics.com/2026/03/09/gang-rape-of-a-90-year-old-woman/