newsics.com
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಂದ ನಂತರ, ಕಂಪನಿಗಳು ತಮ್ಮ ಉದ್ಯೋಗಿಗಳ ವಿಷಯದಲ್ಲಿ ನಡೆದುಕೊಳ್ಳುವ ರೀತಿಯೇ ಸಂಪೂರ್ಣವಾಗಿ ಬದಲಾಗಿದೆ. ಅನೇಕ ಸಂಸ್ಥೆಗಳು ಕೇವಲ ಲಾಭವನ್ನು ಗುರಿಯಾಗಿಸಿಕೊಂಡು ಉದ್ಯೋಗಿಗಳ ಕೆಲಸಕ್ಕೆ ಕುತ್ತು ತರುತ್ತಿವೆ.
ಅಮೆರಿಕದ ಟೆಕ್ ದೈತ್ಯ ‘ಓರಾಕಲ್’ ಬರೋಬ್ಬರಿ 30,000 ಉದ್ಯೋಗಿಗಳನ್ನು ತೆಗೆದುಹಾಕಲು ನಿರ್ಧರಿಸಿದೆ ಎಂಬ ಸುದ್ದಿ ತಂತ್ರಜ್ಞಾನ ಲೋಕವನ್ನು ಬೆಚ್ಚಿಬೀಳಿಸಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಈ ತಿಂಗಳಲ್ಲೇ ಓರಾಕಲ್ ಲೇಆಫ್ ಘೋಷಣೆ ಹೊರಬೀಳುವ ಸಾಧ್ಯತೆಯಿದ್ದು, ಕಂಪನಿಯು ಬೃಹತ್ ಪುನರ್ ಸಂಘಟನೆಗೆ ಸಿದ್ಧವಾಗಿದೆ. ಈ ಉದ್ಯೋಗ ಕಡಿತದಿಂದ ಓರಾಕಲ್‌ನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.
https://www.newsics.com/2026/03/07/trolligare-roast-aishwarya-and-abhishek-arrive-hand-in-hand/