Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಜೆಟ್ ನಲ್ಲಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳಕ್ಕೆ ಸರ್ಕಾರ ಚಿಂತನೆ!
ಕರ್ನಾಟಕಪ್ರಮುಖ

ಬಜೆಟ್ ನಲ್ಲಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳಕ್ಕೆ ಸರ್ಕಾರ ಚಿಂತನೆ!

Share
2 Min Read
SHARE

https://youtube.com/shorts/kmiqVEE0TQA?si=o3_aBX8WyWmejfOy

Subscribe ನ್ಯೂಸಿಕ್ಸ್ ಕನ್ನಡ

newsics.com

ಬಜೆಟ್ ನಲ್ಲಿ ಈ ಬಾರಿ ಪೆಟ್ರೋಲ್ ಡೀಸೆಲ್ ಮೇಲೆ ಒಂದು ರೂಪಾಯಿ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಲು ಸರ್ಕಾರ ಮುಂದಾಗಿದೆ.
ಗ್ಯಾರಂಟಿ ಯೋಜನೆಗಳು ಸೃಷ್ಟಿಸಿದ ಆರ್ಥಿಕ ಹೊರೆ ಒಂದೆಡೆಯಾದರೆ ಸಂಪನ್ಮೂಲ ಕ್ರೋಡೀಕರಣ ಇಲಾಖೆಗಳಿಗೆ ನೀಡಿದ್ದ ರಾಜಸ್ವ ಸಂಗ್ರಹಣೆಯ ಗುರಿ ಈಗಾಗಲೇ ಅತಿಯಾಗಿದೆ. ಹೀಗಾಗಿ ಹೊಸ ಆದಾಯದ ಮೂಲಗಳನ್ನು ಅರಸುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿ ಪರಿಣಮಿಸಿದೆ. ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್‌ಗಳ ಮೇಲೆ ಹೆಚ್ಚುವರಿಯಾಗಿ ಮಾರಾಟ ತೆರಿಗೆ ಹೇರುವುದು ಅನಿವಾರ್ಯವಾಗುವ ಸಾಧ್ಯತೆಯಿದೆ..
ಹಣಕಾಸು ಇಲಾಖೆ ಅಧಿಕಾರಿಗಳ ಜತೆಗೆ ಕಳೆದ ಕೆಲ ದಿನಗಳಿಂದ ಪ್ರತ್ಯೇಕ ಚರ್ಚೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಈ ಪ್ರಸ್ತಾಪವೊಂದು ಈಗಾಗಲೇ ಸಲ್ಲಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 1 ರೂ. ಹೆಚ್ಚುವರಿ ಮಾರಾಟ ತೆರಿಗೆ ವಿಧಿಸುವುದರಿಂದ ತಕ್ಕಮಟ್ಟಿಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ವೇಗ ನೀಡಬಹುದೆಂದು ಚರ್ಚಿಸಲಾಗುತ್ತಿದೆ. ಆದರೆ, ಅದು ಇನ್ನೂ ಅಂತಿಮ ನಿರ್ಧಾರದ ಹಂತಕ್ಕೆ ಬಂದಿಲ್ಲ. ಇದರಿಂದ ಸಾರ್ವಜನಿಕ ವಿರೋಧ ತೀವ್ರವಾಗಬಹುದೆಂಬ ಸಲಹೆಯೂ ವ್ಯಕ್ತವಾಗಿದೆ.
2024ರಲ್ಲಿ ಸಿದ್ದರಾಮಯ್ಯ ಅವರು ಹಾಲಿ ಇರುವ ಪೆಟ್ರೋಲ್ ಮಾರಾಟ ತೆರಿಗೆಯನ್ನು ಶೇ.29.84ಕ್ಕೆ ಏರಿಕೆ ಮಾಡಿದ್ದರು. ಇದರಿಂದ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 3 ರೂ.ನಷ್ಟು ತುಟ್ಟಿಯಾಗಿತ್ತು. ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ಪ್ರಮಾಣದಲ್ಲಿ ಸೆಸ್ ವಿಧಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಆ ಸಂದರ್ಭದಲ್ಲಿ ತಮ್ಮ ನಿರ್ಣಯವನ್ನು ಸಮರ್ಥನೆ ಮಾಡಿಕೊಂಡಿದ್ದರು. ಬಜೆಟ್ ಅಧಿವೇಶನಕ್ಕೆ ಇನ್ನು 4 ದಿನ ಮಾತ್ರ ಬಾಕಿ ಇದೆ.
ಕರ್ನಾಟಕ ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ ಹೆಚ್ಚುವರಿ ಸೆಸ್ (Cess) ವಿಧಿಸುವ ಸಾಧ್ಯತೆ ಇದೆ ಎಂಬ ಚರ್ಚೆಗಳಿವೆ.
1. ಹೆಚ್ಚುವರಿ ಸೆಸ್ ವಿಧಿಸುವ ಸಾಧ್ಯತೆ
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಉಂಟಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಮತ್ತು ಅಭಿವೃದ್ಧಿ ಕೆಲಸಗಳಿಗೆ ಹಣ ಕ್ರೋಢೀಕರಿಸಲು ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಈ ಹಿನ್ನೆಲೆಯಲ್ಲಿ ಇಂಧನದ ಮೇಲೆ 1 ರೂಪಾಯಿ ಹೆಚ್ಚುವರಿ ಸೆಸ್ ವಿಧಿಸಲು ಚಿಂತನೆ ನಡೆಸುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ.
2. ಇಂದಿನ ಇಂಧನ ದರಗಳು (ಮಾರ್ಚ್ 3, 2026)
ಬೆಂಗಳೂರಿನಲ್ಲಿ ಪ್ರಸ್ತುತ ಇಂಧನ ದರಗಳು ಈ ಕೆಳಗಿನಂತಿವೆ:
ಪೆಟ್ರೋಲ್: ಸರಿಸುಮಾರು ₹103.37/ಲೀಟರ್
ಡೀಸೆಲ್: ಸರಿಸುಮಾರು ₹90.99/ಲೀಟರ್
3. ಜನಸಾಮಾನ್ಯರ ಮೇಲೆ ಪರಿಣಾಮ
ಒಂದು ವೇಳೆ ಬಜೆಟ್‌ನಲ್ಲಿ ದರ ಏರಿಕೆ ಘೋಷಣೆಯಾದರೆ, ಅದು ಕೇವಲ ವಾಹನ ಸವಾರರಿಗಷ್ಟೇ ಅಲ್ಲದೆ, ಸರಕು ಸಾಗಣೆ ವೆಚ್ಚ ಹೆಚ್ಚಳವಾಗುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿದೆ.

ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದ ಟ್ರಂಪ್

TAGGED:Government considering increasing petrol and diesel prices in the budget!
Share This Article
Facebook Twitter Copy Link Print
Previous Article ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋನ್ ದಾಳಿ
Next Article ಇಡೀ ವಿಶ್ವವೇ ಅನುಭವಿಸಲಿದೆ ಅಮೆರಿಕಾ ಮಾಡಿದ ತಪ್ಪಿನ ಪರಿಣಾಮ

Popular Posts

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

You Might Also Like

ಪ್ರಮುಖ

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read
ಕರ್ನಾಟಕಪ್ರಮುಖ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

0 Min Read
ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ದೇಶದ ನಂಬರ್‌ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌

3 Min Read

Social Networks

Facebook-f Instagram Twitter
Welcome Back!

Sign in to your account

Lost your password?