https://youtube.com/shorts/kmiqVEE0TQA?si=o3_aBX8WyWmejfOy
Subscribe ನ್ಯೂಸಿಕ್ಸ್ ಕನ್ನಡ
newsics.com
ಇಸ್ರೇಲ್-ಇರಾನ್ ಯುದ್ಧ ಪರಿಸ್ಥಿತಿಯಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವಾರು ವಿಮಾನಗಳು ರದ್ದಾಗಿವೆ.
ಯುದ್ಧದ ಹಿನ್ನೆಲೆ ಇರಾನ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ರಾತ್ರಿ ಕೆಲ ಗಂಟೆಗಳ ಕಾಲ ತೆರೆಯಲಾಗಿದ್ದ ದುಬೈ ಹಾಗೂ ಇರಾನ್ ಏರ್‌ಬೇಸ್‌ಗಳು ಮತ್ತೆ ಮುಚ್ಚಲ್ಪಟ್ಟಿವೆ. ಇದರ ಪರಿಣಾಮವಾಗಿ ದುಬೈ, ಅಬುಧಾಬಿ ಮತ್ತು ಜಿದ್ದಾ ನಗರಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳು ರದ್ದುಗೊಂಡಿವೆ.
ಇಂದು (ಮಾರ್ಚ್ 03) ಬೆಳಗ್ಗೆ 8:50ಕ್ಕೆ ದುಬೈನಿಂದ ಆಗಮಿಸಬೇಕಿದ್ದ ಎಮಿರೇಟ್ಸ್ ವಿಮಾನ, 9:30ಕ್ಕೆ ಅಬುಧಾಬಿಯಿಂದ ಬರಬೇಕಿದ್ದ ಇಂಡಿಗೋ ವಿಮಾನ ಹಾಗೂ 10:45ಕ್ಕೆ ಜಿದ್ದಾದಿಂದ ಬರಬೇಕಿದ್ದ ಇಂಡಿಗೋ ವಿಮಾನಗಳು ರದ್ದುಗೊಂಡಿವೆ. ಹಾಗೆಯೇ ಬೆಂಗಳೂರಿನಿಂದ ದುಬೈಗೆ ಬೆಳಿಗ್ಗೆ 8 ಗಂಟೆಗೆ ತೆರಳಬೇಕಿದ್ದ ಇಂಡಿಗೋ ವಿಮಾನ ಮತ್ತು 10:25ಕ್ಕೆ ಹೊರಡಬೇಕಿದ್ದ ಎಮಿರೇಟ್ಸ್ ವಿಮಾನಗಳ ಪ್ರಯಾಣವೂ ಸ್ಥಗಿತಗೊಂಡಿದೆ.
https://www.newsics.com/2026/03/03/fire-in-aircraft-engine-emergency-landing/