Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 6 ರಿಂದ 9ನೇ ತರಗತಿ ಅಂತಿಮ ಪರೀಕ್ಷೆಗೂ ರಾಜ್ಯಮಟ್ಟದ ಪ್ರಶ್ನೆಪತ್ರಿಕೆ?
ಕರ್ನಾಟಕಪ್ರಮುಖ

6 ರಿಂದ 9ನೇ ತರಗತಿ ಅಂತಿಮ ಪರೀಕ್ಷೆಗೂ ರಾಜ್ಯಮಟ್ಟದ ಪ್ರಶ್ನೆಪತ್ರಿಕೆ?

Share
2 Min Read
SHARE

https://youtube.com/shorts/9RsasXrq5aU?si=7o1s1Fcwa742mk87

Subscribe ನ್ಯೂಸಿಕ್ಸ್ ಕನ್ನಡ

newsics.com

6 ರಿಂದ 9ನೇ ತರಗತಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಮೌಲ್ಯಮಾಪನದ ಗೌಪ್ಯತೆ ಕಾಪಾಡಲು ಮತ್ತು ಶೈಕ್ಷಣಿಕ ಉತ್ಕೃಷ್ಟತೆ ಹೆಚ್ಚಿಸಲು ರಾಜ್ಯ ಮಟ್ಟದಿಂದಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧವಾಗಿದ್ದು, ಸರ್ಕಾರದ ಅಂತಿಮ ನಿರ್ದೇಶನಕ್ಕಾಗಿ ಕಾಯುತ್ತಿದೆ.

ಈವರೆಗೆ ಆಯಾ ಶಾಲಾ ಹಂತದಲ್ಲೇ 9ನೇ ತರಗತಿವರೆಗಿನ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿಕೊಂಡು ಪರೀಕ್ಷೆ ನಡೆಸಿ, ಮೌಲ್ಯಮಾಪನ ಮಾಡಿ ಎಲ್ಲರನ್ನೂ ತೇರ್ಗಡೆ ಮಾಡಲಾಗುತ್ತಿತ್ತು.

ಶಿಕ್ಷಣ ಹಕ್ಕು ಕಾಯ್ದೆಯಂತೆ 1ರಿಂದ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬೇಕು. ಹೀಗಾಗಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾತ್ರ ಮಾಡಲಾಗುತ್ತದೆ. ಇದೇ ಪದ್ಧತಿ ಮುಂದುವರಿಯುತ್ತದೆ. ಆದರೆ ಈಗ ಎಸ್ಸೆಸ್ಸೆಲ್ಸಿ ಫಲಿತಾಂಶ ಇನ್ನಷ್ಟು ಸುಧಾರಣೆಗಾಗಿ ಶಾಲಾ ಹಂತದಲ್ಲಿ ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನ ವಿಷಯವಾಗಿ ಒಂದಿಷ್ಟು ಕಠಿಣ ನಿಲುವು ತಳೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ರೂಪಣಾತ್ಮಕ 4 ಹಾಗೂ ಸಂಕಲನಾತ್ಮಕ 2 ಮೌಲ್ಯಮಾಪನ (ಪರೀಕ್ಷೆ) ಮಾಡಲಾಗುತ್ತದೆ. ಸಂಕಲನಾತ್ಮಕ ಮೌಲ್ಯಮಾಪನವನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹಾಗೂ ಕೊನೆಯಲ್ಲಿ ನಡೆಸಲಾಗುತ್ತದೆ. ಈ ಬಾರಿ ಕೊನೆಯ ಸಂಕಲನಾತ್ಮಕ ಮೌಲ್ಯಮಾಪನಕ್ಕೆ ರಾಜ್ಯಮಟ್ಟದಿಂದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ನೀಡುವ ಸಾಧ್ಯತೆಯಿದೆ. ಆದರೆ ಇನ್ನೂ ಅಂತಿಮವಾಗಿಲ್ಲ.

ವೇಳಾಪಟ್ಟಿ ಅಂತಿಮ:
ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯ ಸೂಚನೆ ಅನುಸಾರ ಸಂಕಲನಾತ್ಮಕ ಮೌಲ್ಯಮಾಪನದ ಅಂತಿಮ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಡಿಡಿಪಿಐ ಕಚೇರಿಯಿಂದ ಶಾಲೆಗಳಿಗೆ ಅವುಗಳ ರವಾನೆಯೂ ಆಗಿದೆ. ಅದರಂತೆ ವಿಷಯವಾರು ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಶ್ನೆಪತ್ರಿಕೆಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ರಾಜ್ಯಮಟ್ಟದಿಂದಲೇ ಪ್ರಶ್ನೆಪತ್ರಿಕೆ ನೀಡಲಾಗುತ್ತಿದೆ ಎಂಬ ಮಾಹಿತಿ ಅಧಿಕೃತವಾಗಿ ಡಿಡಿಪಿಐ, ಬಿಇಒ ಕಚೇರಿ ಹಾಗೂ ಶಾಲೆಗಳಿಗೆ ಬಂದಿಲ್ಲ. ಆದರೆ ಮಾದರಿ ಪ್ರಶ್ನೆಪತ್ರಿಕೆ ಬರಬಹುದು ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ)ಯ ಮೂಲಗಳು ಪ್ರಾಥಮಿಕ ಮಾಹಿತಿ ನೀಡಿವೆ. ಆದರೆ ಇನ್ನೂ ಮಾದರಿ ಪ್ರಶ್ನೆಪತ್ರಿಕೆಯನ್ನು ರವಾನೆ ಮಾಡಿಲ್ಲ. ಹೀಗಾಗಿ ಶಾಲೆಗಳಲ್ಲೂ ಗೊಂದಲವಿದೆ.

ಮೌಲ್ಯಮಾಪನ ಹೇಗೆ?
ಪ್ರಸ್ತುತ ಆಯಾ ಶಾಲಾ ಶಿಕ್ಷಕರೇ ಸಂಕಲನಾತ್ಮಕ ಮೌಲ್ಯಮಾಪನ ನಡೆಸಿ, ವಿದ್ಯಾರ್ಥಿಗಳಿಗೆ ಕಲಿಕೆಯ ಆಧಾರದಲ್ಲಿ ನಿರ್ದಿಷ್ಟ ಅಂಕ ನೀಡಿ ತೇರ್ಗಡೆ ಮಾಡುತ್ತಾರೆ. ಈ ಬಾರಿ ಮೌಲ್ಯಮಾಪನ ಗೌಪ್ಯತೆ ಕಾಪಾಡುವ ಯೋಜನೆ ಇರುವುದರಿಂದ ಹೇಗೆ ಮಾಡಲಿದ್ದಾರೆ ಎಂಬ ಕುತೂಹಲ ಶಿಕ್ಷಕರಲ್ಲೂ ಇದೆ.

2024ರಲ್ಲೂ ಪ್ರಯತ್ನ ನಡೆದಿತ್ತು
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಇಲಾಖೆಯು 2024ರಲ್ಲಿ ಪ್ರಯತ್ನ ನಡೆಸಿತ್ತು. ಆದರೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದರಿಂದ ಪ್ರಸ್ತಾವನೆಯನ್ನು ಕೈಬಿಟ್ಟಿತ್ತು. ಈಗ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಮೌಲ್ಯಮಾಪನ ಗೌಪ್ಯತೆಗೆ ಇಲಾಖೆ ಮುಂದಾಗಿದೆ.

ಗೂಗಲ್ ನಿಂದ ಶತಕೋಟಿ ಲೀಟರ್‌ಗಳಷ್ಟು ನೀರನ್ನು ಬಳಕೆ!

TAGGED:State-level question paper for final exams for classes 6 to 9?
Share This Article
Facebook Twitter Copy Link Print
Previous Article ಗೂಗಲ್‌ನಿಂದ ಶತಕೋಟಿ ಲೀಟರ್ ನೀರು ಬಳಕೆ! ಎಲ್ಲೆಡೆ ಇದೇ ಚರ್ಚೆ ಯಾಕೆ?
Next Article ಮದುವೆ ಮುರಿದ ಬಳಿಕ ಮನಸ್ಸಿನ ಭಾವನೆ ಹಂಚಿಕೊಂಡ ಸ್ಮೃತಿ

Popular Posts

Modi and DK ಮುಖ್ಯಮಂತ್ರಿಯಾದ ಬಳಿಕ ಮೊದಲ‌ ಬಾರಿ ಮೋದಿ ಭೇಟಿಯಾದ ಡಿಕೆ: ಪ್ರಧಾನಿ ಜತೆ ಚರ್ಚಿಸಿದ್ದೇನು?

1 Min Read

Burude case ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ನಟ ಪ್ರಕಾಶ್ ರಾಜ್! ಕೇರಳದಿಂದ 200 ಕೋಟಿ ಫಂಡಿಂಗ್, ಚಿನ್ನಯ್ಯ ಹೇಳಿದ್ದೇನು?

4 Min Read

ಸಾಗರದಲ್ಲಿ ಪೆಟ್ರೋಲ್ ಕದಿಯೋ ಗ್ಯಾಂಗ್: ಬಸ್, ರೈಲ್ವೆ ನಿಲ್ದಾಣದ ಬೈಕ್ ಗಳೇ ಕಳ್ಳರ ಟಾರ್ಗೆಟ್!

1 Min Read

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read

You Might Also Like

ದೇಶಪ್ರಮುಖ

ಸೊಸೆ ಮೇಲೆ ಮಾವನಿಂದಲೇ ಪದೇ ಪದೇ ಅತ್ಯಾಚಾರ: ಫೋನ್ ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ

2 Min Read
ಕರ್ನಾಟಕಪ್ರಮುಖ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ : ಬಾಯ್ಸ್​​​​ ನಿಮಗೂ ಉಚಿತ ಪ್ರಯಾಣ

1 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ವಿದೇಶದೇಶಪ್ರಮುಖ

ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?