https://youtube.com/shorts/1QBsT4fM7Oc?si=2UevBtM7l5058Pmp
Subscribe ನ್ಯೂಸಿಕ್ಸ್ ಕನ್ನಡ
newsics.com
ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆ ಕೊಲೆ ಕೇಸ್‌ನಲ್ಲಿ ಸಿಲುಕಿರುವ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಖತರ್ನಾಕ್ ಸುಚಿತ್ರಾ ಅಸಲಿ ಮುಖವನ್ನು ಪೊಲೀಸರು ಬಯಲು ಮಾಡಿದ್ದಾರೆ. ಇಬ್ಬರ ಬಗ್ಗೆ ಬಗೆದಷ್ಟೂ ರಹಸ್ಯಗಳು ಬಯಲಾಗುತ್ತಿವೆ. ಈ ಕಮಲಾಕರ್ ಭಟ್ ಜ್ಯೋತಿಷಿ ವೇಷ ತೊಡುವ ಮುನ್ನ ವೀಳ್ಯದೆಲೆ ಹಾಗೂ ಕಡ್ಲೆಪುರಿ ಮಾರ್ತಿದ್ದನಂತೆ. ವಂಚನೆ ಮಾಡಿಯೇ ಜ್ಯೋತಿಷಿಯಾಗಿದ್ದ ಎಂದೂ ತಿಳಿದು ಬಂದಿದೆ.
ಕಮಲಾಕರ ಭಟ್ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. 2005ರ ಮೊದಲು, ತನ್ನ ಊರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಡ್ಲೆಪುರಿ ಮತ್ತು ವೀಳ್ಯದೆಲೆಯನ್ನು ಮಾರಾಟ ಮಾಡುತ್ತಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದ ಈತ, ಇದ್ದಕ್ಕಿದ್ದಂತೆ 2005ರಲ್ಲಿ ಊರಿನಿಂದ ನಾಪತ್ತೆಯಾಗುತ್ತಾರೆ.
1994- 96 ಅವಧಿಯಲ್ಲಿ ಮೈಸೂರಿನ ಸರ್ಕಾರಿ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲೂ ಓದಿದ್ದ. ಈ ವೇಳೆ ಪಾಠಶಾಲೆಯ ಹಾಸ್ಟೆಲ್‌ನಲ್ಲೇ ವಾಸವಿದ್ದ. ಈ ವೇಳೆ ಕಮಲಾಕರ ಭಟ್ ಜತೆ ಸಖ್ಯ ಹೊಂದಿದ್ದ ಕೆಲವರು ಮೈಸೂರಿನಲ್ಲಿ ಗಪ್‌ಚುಪ್ ಆಗಿಬಿಟ್ಟಿದ್ದಾರೆ. ನಂತರ ಈತ ಕೇರಳಕ್ಕೆ ತೆರಳಿ ಅಲ್ಲಿ ಜ್ಯೋತಿಷ್ಯ ಹಾಗೂ ವಶೀಕರಣ ಶಾಸ್ತ್ರವನ್ನು ಕಲಿತನೆಂದು ಹೇಳಲಾಗುತ್ತಿದೆ. ಕಲಿಕೆ ನಂತರ ಗ್ರಾಮಕ್ಕೆ ಮರಳಿ ಜ್ಯೋತಿಷ್ಯ ವೃತ್ತಿಯನ್ನು ಆರಂಭಿಸಿದ. ಆರಂಭದಲ್ಲಿ ಅಷ್ಟೇನೂ ಹೆಸರು ಮಾಡದಿದ್ದರೂ, ನಂತರ ಬೆಂಗಳೂರಿಗೆ ತೆರಳಿದ ಮೇಲೆ ಅವರ ಜೀವನದ ದಿಕ್ಕೇ ಬದಲಾಯಿತು.
ಸಾಮಾನ್ಯವಾಗಿ ಸಾಕಷ್ಟು ಜ್ಯೋತಿಷಿಗಳು ಟಿವಿಗಳಲ್ಲಿ ಹಣ ಕೊಟ್ಟು ತಾವೇ ಜ್ಯೋತಿಷ್ಯ ಹೇಳುತ್ತಾರೆ. ಇದೇ ತಂತ್ರವನ್ನು ಬಳಕೆ ಮಾಡಿಕೊಂಡು ಈ ಕಮಲಾಕರ್ ಭಟ್ ಸಹ ನಾಡಿನ ಪ್ರತಿಷ್ಟಿತ ಟಿವಿಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ. ಇದಾಗಿದ್ದೇ ತಡ ಅವರ ಲಕ್ ಒಮ್ಮೆಲೇ ಚೇಂಜ್ ಆಗಿಬಿಟ್ಟಿತು.
ಕೆಲವೇ ವರ್ಷಗಳಲ್ಲಿ ಕಮಲಾಕರ ಭಟ್ ನೂರಾರು ಕೋಟಿ ಆಸ್ತಿಯ ಒಡೆಯನಾಗಿಬಿಟ್ಟ. ಅಷ್ಟೇ ಅಲ್ಲ, ಸಮಾಜ ಸೇವೆಯನ್ನೂ ಮಾಡಲು ಮುಂದಾಗಿ ಈ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡ. ಇನ್ನೊಂದು ಮೂಲದ ಮಾಹಿತಿ ಪ್ರಕಾರ, ಈ ಜ್ಯೋತಿಷಿ ಬ್ರೋಕರ್‌ಗಳನ್ನು ನೇಮಕ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಬ್ರೋಕರ್‌ಗಳು ಕಷ್ಟದಲ್ಲಿರುವ ಜನರನ್ನು ಪತ್ತೆ ಮಾಡಿ ಕಮಲಾಕರ್‌ಗೆ ಪರಿಚಯ ಮಾಡಿಕೊಡುತ್ತಿದ್ದರು. ಸಿದ್ದಾಪುರ ಮತ್ತು ಶಿವಮೊಗ್ಗ ಭಾಗದಲ್ಲಿ ಕೆಲವು ಬ್ರೋಕರ್‌ಗಳನ್ನು ನೇಮಿಸಿಕೊಂಡು, ವಶೀಕರಣ ಮತ್ತು ಜ್ಯೋತಿಷ್ಯ ಸೇವೆಗಳಿಗಾಗಿ ಗ್ರಾಹಕರನ್ನು ಕರೆತರುತ್ತಿದ್ದರು. ಇದರಿಂದ ಬ್ರೋಕರ್‌ಗಳಿಗೆ ಕಮಿಷನ್ ನೀಡಿ, ತನ್ನ ಆದಾಯ, ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ.
https://www.newsics.com/2026/02/10/new-twist-in-student-kidnapping-attempt-case/