https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಮಗುವಿನ ಸೋದರಮಾವ ಅಖಿಲೇಶ್ ಚೌಹಾಣ್ ತಮ್ಮ ಸೋದರಳಿಯನಿಗೆ ನೀಡಿರುವ ಉಡುಗೊರೆಗಳ ಪಟ್ಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಮಗುವಿನ ನಾಮಕರಣ ಅಥವಾ ಹುಟ್ಟುಹಬ್ಬದ ಸಂಪ್ರದಾಯದಂತೆ ಪುರೋಹಿತರು ಮೈಕ್ ಹಿಡಿದು ಮಗುವಿನ ಮಾವನ ಕಡೆಯಿಂದ ಬಂದಿರುವ ಉಡುಗೊರೆಗಳನ್ನು ಓದುತ್ತಿದ್ದಾರೆ. ಆ ಪಟ್ಟಿಯಲ್ಲಿ ಸಾಧಾರಣ ವಸ್ತುಗಳಿರಲಿಲ್ಲ, ಬದಲಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳಿದ್ದವು.
ಅಲಿಗಢ-ಆಗ್ರಾ ಹೈವೇ ಪಕ್ಕದಲ್ಲಿರುವ ಒಂದು ಬೆಲೆಬಾಳುವ ಪ್ಲಾಟ್ (ನಿವೇಶನ). ಹನ್ನೊಂದು ಲಕ್ಷ ರೂಪಾಯಿ (11,00,000) ನಗದು ಹಣ. 20 ಗ್ರಾಂ ತೂಕದ ಚಿನ್ನದ ಸರ. 500 ಗ್ರಾಂ ತೂಕದ ಐದು ಬೆಳ್ಳಿಯ ಪಾತ್ರೆಗಳು, ಬೆಳ್ಳಿಯ ಲಕ್ಷ್ಮಿ-ಗಣೇಶ ವಿಗ್ರಹಗಳು, ಕೈಕಾಲುಗಳಿಗೆ ಬೆಳ್ಳಿಯ ಬಳೆಗಳು. 15 ಜೊತೆ ಬ್ರಾಂಡೆಡ್ ಬಟ್ಟೆಗಳು ಮತ್ತು ಅಸಂಖ್ಯಾತ ಆಟಿಕೆಗಳು.
ಮಗು ಮಾತ್ರವಲ್ಲ, ಇಡೀ ಕುಟುಂಬಕ್ಕೇ ಹಬ್ಬ!
ಸೋದರಮಾವನ ಉದಾರತೆ ಕೇವಲ ಮಗುವಿಗೆ ಸೀಮಿತವಾಗಿರಲಿಲ್ಲ. ಮಗುವಿನ ತಾಯಿಗೆ (ಮಾವನ ತಂಗಿ) 35 ಗ್ರಾಂನ ‘ರಾಣಿ ಹಾರ’, ಚಿನ್ನದ ಬಳೆಗಳು, ಉಂಗುರ, ಓಲೆಗಳು ಮತ್ತು ಬೆಳ್ಳಿಯ ಕಾಲುಂಗುರಗಳನ್ನು ನೀಡಲಾಗಿದೆ. ಅಲ್ಲದೆ ಮನೆಯ ಹಿರಿಯರಿಗಾಗಿ 101 ರೇಷ್ಮೆ ಸೀರೆಗಳು ಮತ್ತು ಪುರುಷರಿಗೆ 101 ಪ್ಯಾಂಟ್-ಶರ್ಟ್ ಸೆಟ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.
ಸಹೋದರಿಯರ ಆತ್ಮಹತ್ಯೆ ಕೇಸ್: ಕೊರಿಯನ್ ಹುಡುಗ್ರನ್ನ ವಿವಾಹವಾಗಲು ಬಯಸಿದ್ರು, ಆ ರಾತ್ರಿ ಗಾಜಿಯಾಬಾದ್‌ನಲ್ಲಿ ಏನಾಯ್ತು?