Subscribe ನ್ಯೂಸಿಕ್ಸ್ ಕನ್ನಡ
newsics.com
ಮೈ ಕೊರೆಯುವ ಚಳಿ-ಗಾಳಿ ಹಾಗೂ ಹಿಮದ ರಾಶಿಯ ನಡುವೆ ಸ್ಯಾಂಡಲ್‌ವುಡ್ ನಟಿ ಶುಭಾ ರಕ್ಷಾ ಬಾಲಿವುಡ್ ಕ್ವೀನ್‌ನಂತೆ ಸಂಭ್ರಮಿಸಿದ್ದಾರೆ. ಹಸಿರು ಸೀರೆ ಉಟ್ಟು ಭರ್ಜರಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.

ನಟಿ ಶುಭಾ ರಕ್ಷಾ ಸದ್ಯ ಶಿಮ್ಲಾ ಪ್ರವಾಸದಲ್ಲಿದ್ದು, ಈ ನಡುವೆಯೇ ಅದರಲ್ಲೂ ಮೈ ಕೊರೆಯುವ ಹಿಮದ ರಾಶಿಯಲ್ಲಿ, ಹಾಟ್ ಲುಕ್ ನೀಡುವ ನಿಯಾನ್ ಹಸಿರು ಸೀರೆಯುಟ್ಟು, ಎಂಜಾಯ್ ಮಾಡಿದ್ದಾರೆ.ಸ್ಲಿವ್‌ಲೆಸ್ ಬ್ಲೌಸ್ ಹಾಗೂ ನಿಯಾನ್ ತೆಳುವಾದ ಜಾರ್ಜೆಟ್ ಸಾದಾ ಸೀರೆಯುಟ್ಟಿದ್ದ ಶುಭಾ ರಕ್ಷಾ, ಈ ಸೀರೆಯ ಮೇಲೆ ಟ್ರೆಂಚ್ ಕೋಟ್ ಕೂಡ ಧರಿಸಿಲ್ಲ! ಹಾಗಾಗಿ ಅವರ ಈ ಲುಕ್ ಗ್ಲಾಮರಸ್ ಆಗಿ ಅವರನ್ನು ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್. ಒಟ್ಟಿನಲ್ಲಿ ಇತ್ತೀಚೆಗೆ ಹಿಮದ ನಡುವೆ ಸೀರೆಯುಟ್ಟು ಸಂಭ್ರಮಿಸುವ ನಾರಿಯರ ಸಾಲಿಗೆ ಇದೀಗ ಕನ್ನಡದ ನಟಿಮಣಿಯರು ಸೇರುತ್ತಿದ್ದಾರೆ.ಈ ಬಗ್ಗೆ ಮಾತನಾಡಿದ ನಟಿ ಶುಭಾ ರಕ್ಷಾ, ʼʼಮೊದಲಿನಿಂದಲೂ ನನಗೆ ಬಾಲಿವುಡ್ ಸ್ಟೈಲ್‌ನಲ್ಲಿ ಸೀರೆಯನ್ನು ಹಾರಾಡಿಸುತ್ತಾ ಹಿಮದ ನಡುವೆ ಸಂಭ್ರಮಿಸುವ ಆಸೆಯಿತ್ತು. ಅದನ್ನು ಈಡೇರಿಸಿಕೊಂಡೆʼʼ ಎನ್ನುತ್ತಾರೆ ಶುಭಾ ರಕ್ಷಾ. ʼʼಆ ಹಿಮದ ರಾಶಿಯಲ್ಲಿ ಸೀರೆಯಲ್ಲಿ ಕ್ಷಣ ಕಾಲವೂ ಇರಲು ಸಾಧ್ಯವಾಗುವುದಿಲ್ಲ. ಆ ಮಟ್ಟಿಗೆ ಚಳಿ ನಮ್ಮನ್ನು ನಡುಗಿಸುತ್ತದೆ. ಕೊರೆಯುವ ಹಿಮದ ನಡುವೆ ಒಂದು ಕ್ಷಣ ನಿಲ್ಲಲು ಕಷ್ಟವಾಗುತ್ತದೆ. ಕೆಲವು ಕ್ಷಣಗಳಿಗೆ ಮಾತ್ರ ನಾನು ಈ ಗ್ಲಾಮರಸ್ ಸೀರೆಯಟ್ಟು ಸಂಭ್ರಮಿಸಿದೆ ಎಂದಿದ್ದಾರೆ.