Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಟ ಪೋಸಾನಿ ಕೃಷ್ಣ ಮುರಳಿ ವಿರುದ್ಧ ನಟಿ ಪೂನಮ್ ಕೌರ್ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಸಿಗ್ನೇಚರ್ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ವ್ಯಕ್ತಿಗಳು ತಮ್ಮ ಜೀವನದೊಂದಿಗೆ ಹೇಗೆ ಆಟವಾಡಿದರು ಅನ್ನೋದನ್ನು ಮನನೊಂದು ವಿವರಿಸಿದ್ದಾರೆ. ಅದರಲ್ಲೂ ತಮಗೆ ಅನ್ಯಾಯ ಮಾಡಿದವರ ವಿರುದ್ಧ ಹತ್ತು ಹಲವು ಆರೋಪಗಳನ್ನು ನಟಿ ಪೂನಂ ಕೌರ್ ಮಾಡುತ್ತಿದ್ದಾರೆ.
ಈ ಸಂದರ್ಶನದಲ್ಲಿ ತನ್ನ ಬದುಕಿನ ಕಷ್ಟದ ದಿನಗಳನ್ನು ತೆರೆದಿಟ್ಟಿದ್ದಾರೆ. ಪೊಸಾನಿ ಕೃಷ್ಣ ಮುರಳಿ ಪತ್ರಿಕಾಗೋಷ್ಠಿ ತನ್ನ ಬದುಕನ್ನು ಹೇಗೆ ನಾಶ ಪಡಿಸಿತು ಅನ್ನೋದು ಹೇಳಿಕೊಂಡಿದ್ದಾರೆ.
ಪೊಸಾನಿ ಕೃಷ್ಣ ಮುರಳಿ ಆರೋಪದ ಬಳಿಕ ಮದುವೆಯಾಗುವ ಆಸೆಯೇ ಸಂಪೂರ್ಣ ಸತ್ತುಹೋಯಿತು. ಅವರ ಪತ್ರಿಕಾಗೋಷ್ಠಿ ನಂತರ ಹಣ, ಮದುವೆ, ಕೆಲಸ, ಆರೋಗ್ಯ, ಸಂತೋಷ, ಭರವಸೆ ಸೇರಿದಂತೆ ಜೀವನದ ಎಲ್ಲವೂ ನಾಶವಾಯ್ತು. ಆ ಪತ್ರಿಕಾಗೋಷ್ಠಿ ನನ್ನ ಬದುಕನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿತು ಎಂದು ಬೇಸರ ಹೊರ ಹಾಕಿದ್ದಾರೆ.
ಪೊಸಾನಿ ಮಾಡಿದ ಪತ್ರಿಕಾಗೋಷ್ಠಿ ಬಳಿಕ ಅವರ ತಾಯಿ ಆರೋಗ್ಯದಲ್ಲಿಯೂ ಏರುಪೇರಾಗಿತ್ತು. ಆ ಪತ್ರಿಕಾಗೋಷ್ಠಿಯ ನಂತರ ನನ್ನ ತಾಯಿಗೆ ಹೃದಯಾಘಾತವಾಗಿತ್ತು. ಆಗ ನಾನು ಕಾಲೇಜು ತೊರೆದಿದ್ದೆ. ಹಲವು ದಿನಗಳವರೆಗೆ ಆಸ್ಪತ್ರೆಯಲ್ಲಿದ್ದು ನನ್ನ ತಾಯಿಯ ಆರೈಕೆ ಮಾಡಿದೆಎಂದು ನಟಿ ಪೂನಂ ಕೌರ್ ಭಾವುಕರಾಗಿದ್ದಾರೆ.
ನಿರ್ದೇಶಕ ದಾಸರಿ ನಾರಾಯಣ ರಾವ್ ಜೀವಂತವಾಗಿದ್ದರೆ, ನನಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನನ್ನ ಜೀವನವನ್ನು ನಾಶ ಮಾಡುವುದಕ್ಕೆ ಸುಮಾರು ₹15 ಕೋಟಿ ಖರ್ಚು ಮಾಡಲಾಯಿತು. ಇದೇ ವೇಳೆ ಈಕೆಯ ಕಷ್ಟದ ಸಮಯದಲ್ಲಿ ಸ್ನೇಹಿತನೊಬ್ಬ ಮದುವೆಯಾಗಲು ಮುಂದೆ ಬಂದಿದ್ದ. ಆಗ ನಟ ಪೋಸಾನಿ ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಆರೋಪಗಳನ್ನು ಮಾಡಿದರು. ಇದರಿಂದಾಗಿ ಮದುವೆಗೆ ಮುಂದಾಗಿದ್ದ ಆ ವ್ಯಕ್ತಿ ಕೂಡ ಇವರೊಂದಿಗೆ ಸಂಪರ್ಕವನ್ನು ಕಡಿತ ಮಾಡಿಕೊಂಡು ದೂರವಾಗಿದ್ದರು ಎಂದು ಪೂನಂ ಕೌರ್ ಹೇಳಿಕೊಂಡಿದ್ದಾರೆ.
https://www.newsics.com/2026/01/07/4-50-lakh-bpl-ration-card-grilakshmi-canceled-across-the-state/