Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು:ಡ್ರಂಕ್ ಆಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ಪೊಲೀಸರ ಜೊತೆಗೆ ಕಿರಿಕ್ ಮಾಡಿದ ವ್ಯಕ್ತಿಯೊಬ್ಬ, ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳು ಕುಡಿದು ವಾಹನ ಚಲಾಯಿಸುವವರನ್ನು ಹಿಡಿದು ದಂಡ ಹಾಕುವ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ತಪಾಸಣೆಯ ಸಮಯದಲ್ಲಿ, ಪೊಲೀಸರು ಕುಡಿದು ವಾಹನ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ತಡೆದು ಬ್ರೀತ್ ಅನಲೈಸರ್ ಊದುವಂತೆ ಹೇಳಿದ್ದಾರೆ. ಇದಕ್ಕೆ ನಿರಾಕರಿಸಿ, ಪೊಲೀಸರಿಗೆ ಬೆದರಿಕೆ ಹಾಕಿ, ಬ್ರೀತ್ ಅನಲೈಜರ್ ಪರೀಕ್ಷೆಗೆ ನಿರಾಕರಿಸಿ, ತನ್ನ ಸ್ವಂತ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ.
ವರದಿಯಗಳ ಪ್ರಕಾರ, ಪೊಲೀಸರ ಜತೆಗೆ ಗಲಾಟೆ ಮಾಡುವಾಗ ನಿಮ್ಮ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಕ್ಕಿಂತ ಸಾಯುವುದು ಅಥವಾ ತನ್ನ ಬೈಕನ್ನು ಸುಡುವುದು ಉತ್ತಮ ಎಂದು ಹೇಳಿದ್ದೇನೆ.
ಬೆಂಕಿ ನಂದಿಸಿದ ಪೊಲೀಸರು ಸದ್ಯ ಬೈಕ್ ನ್ನು ವಶಕ್ಕೆ ಪಡೆದು ಠಾಣೆಗೆ ರವಾನಿಸಿದ್ದಾರೆ. ಪರಾರಿಯಾಗಿರುವ ವ್ಯಕ್ತಿಗೆ ಹುಡುಕಾಟ ನಡೆಸಲಾಗಿದೆ.
https://www.newsics.com/2026/01/02/air-india-pilot-arrested-in-vancouver-for-smelling-alcohol/